Varthuru :ವರ್ತೂರು ಶ್ರೀರಾಮ ಸೇವಾ ಸಮಿತಿ ವತಿಯಿಂದ ರಾಮ ನವಮಿ ಆಚರಣೆ.ಪಾನಕ,ಮಜ್ಜಿಗೆ ಕುಡಿದು ತಂಪಾದ ಜನ.
ಸ್ಥಳೀಯ ಸುದ್ದಿ


ಮಹದೇವಪುರ: ದೇಶದೆಲ್ಲೆಡೆ ಶ್ರೀರಾಮ ನವಮಿಯ ಸಂಭ್ರಮ ಜೋರಾಗಿತ್ತು,ಅದೇ ರೀತಿ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಶ್ರೀರಾಮ ಸೇವಾ ಸಮಿತಿ ವತಿಯಿಂದ ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ರಾಮನ ಕೃಪೆಯಿಂದ ಮಳೆ ಬೆಳೆಯಾಗಿ ನಾಡು ಸಮೃದ್ಧಿ ಹೊಂದಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಶ್ರೀ ರಾಮನ ಆರ್ಶಿವಾದದಿಂದ ಆದಷ್ಟು ಬೇಗ ಮಳೆ ಬಂದು ರೈತರ ಮತ್ತು ಜನರನ್ನ ತಂಪು ಮಾಡಲೀ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡೋಣ ಎಂದರು.ಪಾನಕ,ಮಜ್ಜಿಗೆ, ಕೋಸಂಬರಿ ಎಷ್ಟು ತಂಪೂ ಅದೇ ರೀತಿ ಜನರು ಕೂಡ ಶ್ರೀರಾಮನ ಆಶಿರ್ವಾದ ಪಡೆದು ಮುಂದಿನ ದಿನಗಳಲ್ಲಿ ಮಳೆ ಬೆಳೆ ಆಗಿ ಸಂತೋಷದಿಂದ ಆರೋಗ್ಯವಾಗಿ ಜೀವನ ಮಾಡಲೀ ಎಂದರು.
ಪ್ರತಿ ವರ್ಷ ವರ್ತೂರಿನಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ರಾಮ ನವಮಿಯಂದು ಪಾನಕ,ಮಜ್ಜಿಗೆ, ಕೋಸಂಬರಿ ವಿತರಣೆ ಮಾಡುತ್ತಾ ಬರುತ್ತಿದ್ದೇವೆ ಎಂದರು.
ಶ್ರೀರಾಮನ ಆರಾಧನೆ ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಗುಂಜೂರು,ಹಗದೂರು,ಮಧುರನಗರದಲ್ಲಿ ಜಾತ್ರೆ,ರಥೋತ್ಸವ ಗ್ರಾಮದೇವತೆಗಳ ಉತ್ಸವ ನೇರವೇರಿದೆ ಎಂದು ಹೇಳಿದರು.
ಶ್ರೀರಾಮ ನವಮಿಯ ಹಿನ್ನೆಲೆಯಲ್ಲಿ ಶ್ರೀರಾಮನ ಜಪ ಮೊಳಗಿದ್ದು,ಭಕ್ತರು ಭಕ್ತಿಭಾವದಿಂದ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶ್ರೀರಾಮ ಸೇವಾಸಮಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
