ಕೊಡತಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ವೀಣಾ ರವಿ ಆಯ್ಕೆ.
ಸ್ಥಳೀಯ ಸುದ್ದಿರಾಜಕೀಯ


ಮಹದೇವಪುರ: ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವೀಣಾ ರವಿ ಆಯ್ಕೆಯಾಗಿದ್ದಾರೆ.
ಕೃಷ್ಣವೇಣಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.ಸ್ವಾಭಿಮಾನಿ ಬಣ್ಣದ ಬೆಂಬಲಿತ ಅಭ್ಯರ್ಥಿಯಾಗಿ ವೀಣಾ ರವಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಧ ಕಾವೇರಪ್ಪ ನಾಮಪತ್ರ ಸಲ್ಲಿಸಿದ್ದರು.
28 ಸದಸ್ಯಬಲ ಹೊಂದಿರುವ ಪಂಚಾಯಿತಿಯಲ್ಲಿ ವೀಣಾ ರವಿ 15 ಮತ್ತು ಅವರು ರಾಧಕಾವೇರಪ್ಪ 13 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.
ಈ ವೇಳೆ ಗ್ರಾ.ಪಂನ ನೂತನ ಅಧ್ಯಕ್ಷೆ ವೀಣಾ ರವಿ ಮಾತನಾಡಿ ಇರುವಂತಹ ಕಡಿಮೆ ಅವಧಿಯಲ್ಲಿ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಸದಸ್ಯರುಗಳನ್ನು ಒಟ್ಟುಗೂಡಿಸಿಕೊಂಡು ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಡತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ರಮೇಶ್ ರೆಡ್ಡಿ, ಅಶಾ, ನಾರಾಯಣಸ್ವಾಮಿ ಬಾಬು, ಮಮತಾ, ನಳಿನಾಕ್ಷಿ ನಂಜುಂಡ ರೆಡ್ಡಿ, ಶಿವಕುಮಾರ್, ಸತೀಶ್ ಮುಖಂಡರಾದ ಸದಾಶಿವರೆಡ್ಡಿ, ಕುಪ್ಪಿ ಮಂಜುನಾಥ್, ಸುನಿಲ್ ಮತ್ತಿತರರು ಹಾಜರಿದ್ದರು.