ವೇಮನರ ಜೀವನ ಸಂದೇಶ ಸರ್ವಕಾಲಿಕ ಶ್ರೇಷ್ಟವಾಗಿದೆ: ಜಯಚಂದ್ರರೆಡ್ಡಿ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/19/20261 min read

ಕೆ.ಆರ್.ಪುರ: ಕವನಗಳ ಮೂಲಕ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ಖಂಡಿಸಿ, ಸಾಮಾಜಿಕ ಸಮಾನತೆ, ಮಾನವತಾವಾದ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಸಾರಿದ ಮಹಾನ್ ವ್ಯಕ್ತಿಯಾಗಿದ್ದು,ಇವರ ತತ್ವ ಆದರ್ಶಗಳು ಯುವ ಪೀಳಿಗೆಗೆ ಮಾರ್ಗದರ್ಶಿ ಎಂದು ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನಸಂಘದ ಆಡಳಿತ ಮಂಡಳಿ ಸದಸ್ಯ ಜಯಚಂದ್ರರೆಡ್ಡಿ ಅವರು ತಿಳಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ ರೆಡ್ಡಿಯವರ 614 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ, ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಎಲ್ಲರೂ ಸಮಾನರು ಎಂದು ಸಾರಿದ ವೇಮನರ ಬದುಕು ಹಾಗೂ ಹಾಗೂ ಅವರ ಸಾಹಿತ್ಯಕ ಚಿಂತನೆಯ ಸಾರ ಸ್ಪೂರ್ತಿಯಾಗಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಆ ನಿಟ್ಟಿನಲ್ಲಿ ನಾವೆಲ್ಲ ಸಾಗಬೇಕು ಎಂದರು.

ಸಿದ್ಧ ಸಾಧಕರು ಸತ್ಯದ ಸಾಕ್ಷಾತ್ಕಾರ ಹೊಂದಿ ಲೋಕಕ್ಕೆ ಬೆಳಕಾದ ಮಹಾಯೋಗಿ ವೇಮನ ಅದ್ಭುತ, ದೈತ್ಯಪ್ರತಿಭೆಯ ಚಿಂತಕರಾಗಿ, ಸಮಾಜ ಸುಧಾರಕರಾಗಿ, ಕ್ರಾಂತಿಕಾರಿಯಾಗಿ ನೀಡಿದ ಕೊಡುಗೆ ಅಸಾಧಾರಣ.

ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದು ಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದ ಸಮಾಜ ಸುಧಾರಕರಾದ ಮಹಾಯೋಗಿ ವೇಮನರ ವಚನಗಳು ನಮಗೆ ದಾರಿ ದೀಪವಾಗಿವೆ ಎಂದರು.

ಇವರೋರ್ವ ತತ್ವಜ್ಞಾನಿಯೂ ಕೂಡ,ಸಮಾಜ ಸುಧಾರಣೆ ಹಾಗೂ ತತ್ವ ಹಾಗೂ ನೀತಿ ಬೋಧನೆಗಳ‌ ಕುರಿತ ಸಾಕಷ್ಟು ಪದ್ಯ ರಚಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ ಅವರು ಸಮಾಜದ ಸಮಗ್ರ ಅಭಿವೃದ್ಧಿಗೆ ವೇಮನ ಅವರು ಹಾಕಿದ ಮಾರ್ಗವನ್ನು ಪ್ರತಿಯೊಬ್ಬರು ಪಾಲಿಸುವಂತೆ ಮನವಿ ಮಾಡಿದರು.

ವೇಮನರು ತಮ್ಮ ಎಲ್ಲ ವಚನಗಳಲ್ಲಿ ಆತ್ಮಚಿಂತನೆ ಕುರಿತು ಹೆಚ್ಚು ತಿಳಿಸಿದ್ದಾರೆ. ಆತ್ಮಚಿಂತನೆಯಿಂದ ವ್ಯಕ್ತಿಯಲ್ಲಿ ನೈತಿಕತೆ ಬರಲಿದೆ. ಈ ನೈತಿಕತೆ ಬಳಸಿಕೊಂಡು ನಾವು ಮುಕ್ತಿ ಮಾರ್ಗದ ಕಡೆ ಸಾಗಬೇಕು. ಅಲ್ಲಿ ಆತ್ಮ ಚಿಂತನೆ, ನೈತಿಕತೆ, ಮುಕ್ತಿ ಮಾರ್ಗಕ್ಕೆ ಸಂಬಂಧಪಟ್ಟ ಬೇರೆ ಬೇರೆ ರೀತಿಯಾದ ವಚನಗಳನ್ನು ರಚಿಸಿರುವುದನ್ನು ನಾವು ಕಾಣಬಹುದಾಗಿದೆ ಎಂದರು.

ಸಾಮಾಜಿಕ ಸಮಾನತೆ, ನೈತಿಕ ಮೌಲ್ಯಗಳ ಬಗ್ಗೆ ಜನಸಾಮಾನ್ಯರ ಭಾಷೆಯಲ್ಲಿ ಸರಳ ಮತ್ತು ಶಕ್ತಿಯುತವಾದ ವಚನಗಳ ಮೂಲಕ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ತಮ್ಮ ಪದ್ಯಗಳ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಾಬುರೆಡ್ಡಿ,ಬಾಣಸವಾಡಿ ಜಯರಾಮರೆಡ್ಡಿ,ರಾಮಕೃಷ್ಣ ರೆಡ್ಡಿ,ರಜಾರೆಡ್ಡಿ,ಗಣೇಶ್ ರೆಡ್ಡಿ,ವಿನಯ್ ರೆಡ್ಡಿ, ಗುಂಜುರು ಮಂಜುನಾಥ ರೆಡ್ಡಿ, ನಾಗರಾಜರೆಡ್ಡಿ,ಅಭಿಲಾಷ್ ಇದ್ದರು.