ವೆಂಕಟರಮಣಪ್ಪ ಗರಡಿ ಮನೆಯ ಹಿರಿಯ ಪೈಲ್ವಾನ್​ ಮರಿಯಪ್ಪ ನಿಧನ, ಕಂಬನಿ ಮಿಡಿದ ಶಿಷ್ಯವೃಂದ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/30/20251 min read

ದೊಡ್ಡಬಳ್ಳಾಪುರ: ನಗರದ ತಲಕ್ ವೆಂಕಟರಮಣಪ್ಪ ಗರಡಿ ಮನೆಯ ಹಿರಿಯ ಪೈಲ್ವಾನ್​ ಮರಿಯಪ್ಪನವರು ಇಂದು ದೈವಾದೀನರಾಗಿದ್ದಾರೆ.

ನಗರದ ಮಾರುತಿನಗರದ ಹಂಸ ಹೋಟೆಲ್​ ಬಳಿ ವಾಸಿಯಾಗಿದ್ದ ಇವರು ಇಂದು ವಯೋಸಹಜ ಸಾವನ್ನಪ್ಪಿದ್ದಾರೆ. ಮೃತರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ತಾಲ್ಲೂಕಿನ ಕೋಟೆ ಗರಡಿ ಮನೆ ಸೇರಿದಂತೆ ಹಲವೆಡೆ ಪಂದ್ಯಗಳನ್ನು ಗೆದ್ದು ಹೆಸರುವಾಸಿಯಾಗಿದ್ದಾರೆ.

ಪೈಲ್ವಾನ್​ ಮರಿಯಪ್ಪನವರ ಸಾವಿನ ಸುದ್ದಿ ತಿಳಿದ ಅವರ ಗರಡಿ ಮನೆಯ ಆಡಳಿತ ಮಂಡಳಿ ಮತ್ತು ಶಿಷ್ಯ ಬಳಗ ಮತ್ತು ಸಾರ್ವಜನಿಕರು ಕಂಬನಿ ಮಿಡಿದ್ದಾರೆ. ಸಂಜೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.