ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ
ಸ್ಥಳೀಯ ಸುದ್ದಿಕ್ರೀಡೆ


ಬೆಂಗಳೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆ.ಎಸ್.ಸಿ.ಎ.) ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ದೇಶದ ಗಮನಸೆಳೆದಿತ್ತು. ಒಂದೆಡೆ ಮಾಜಿ ದಿಗ್ಗಜ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಬಣ ಮತ್ತೊಂದೆಡೆ ಕೆಎನ್ ಶಾಂತಕುಮಾರ್ ಬಣ. ನಾಮಪತ್ರ ತಿರಸ್ಕೃತ, ಹೈಕೋರ್ಟ್‌ನಲ್ಲಿ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಕೆಎಸ್‌ಸಿಎ ಚುನಾವಣೆ ಭಾರಿ ಪೈಪೋಟಿ ಎದುರಿಸಿತ್ತು.
20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ 749 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೆಎನ್ ಶಾಂತಕುಮಾರ್ 558 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 191 ಮತಗಳಿಂದ ವೆಂಕಟೇಶ್ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ವಂಕಟೇಶ್ ಪ್ರಸಾದ್ ಬಣ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದೆ.
ಇನ್ನು ವೆಂಕಟೇಶ್ ಪ್ರಸಾದ್ ಬಣದಿಂದ ಸುಜಿತ್ ಸೋಮಸುಂದರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಮಧುಕರ್ ಅವರು ಖಜಾಂಚಿಯಾಗಿ ಆಯ್ಕೆಯಾಗಿದರು. ಇನ್ನು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ಒಟ್ಟು 1315 ಮತಗಳ ಚಲಾವಣೆಯಾಗಿವೆ. 2013 ರಲ್ಲಿ 1351 ಮತಗಳ ಚಲಾವಣೆಗೊಂಡಿದ್ದವು. ಕೆಎಸ್ಸಿಎ ಇತಿಹಾಸದಲ್ಲಿ 2013ರಲ್ಲೇ ಅತಿ ಹೆಚ್ಚು ಮತದಾನವಾಗಿತ್ತು.
ಈ ಬಾರಿಯ ಕೆಎಸ್‌ಸಿಎ ಚುನಾವಣೆ ತೀವ್ರ ಕೋಲೋಹಾಲ ಸಷ್ಟಿಸಿತ್ತು. ಚುನಾವಣೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ ಪೈಪೋಟಿ ಹೆಚ್ಚಾಗಿತ್ತು. ಇಷ್ಟೇ ಅಲ್ಲ ಚುನಾವಣಾ ಪ್ರಚಾರಗಳು ಭರ್ಜರಿಯಾಗಿ ನಡೆದಿತ್ತು. ಬೆಳಗ್ಗೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಇದರ ಪರಿಣಾಮ ಈ ಬಾರಿ ಕರ್ನಾಟಕ ರಾಜ್ಯ ಸಂಸ್ಥೆ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಈ ಬಾರಿ 1315 ಮತ ಚಲಾವಣೆಯಾಗಿದೆ. ಇದು ಇದುವರೆಗಿನ ಎರಡನೇ ಗರಿಷ್ಠ ಮತದಾನವಾಗಿದೆ.
ವೆಂಕಟೇಶ್ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ 12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ ವಾಪಸ್ಸಾಗಿದ್ದಾರೆ.
ಕೆಎಸ್ಸಿಎ ಅಧ್ಯಕ್ಷರ ಪಟ್ಟಿ
1. ಪ್ರೊ.ಜೆ.ಸಿ ರೋಲೋ 1933-36
2. ಎಸ್.ಪಿ ರಾಜಗೋಪಾಲಾಚಾರಿ 1936-38
3. ಟಿ ಸಿಂಗರವೇಲು ಮುದಲಿಯಾರ್ 1938-53
4. ಜೆ.ಬಿ ಮಲ್ಲಾರಾಧ್ಯ 1953-61
5. ಎಸ್.ಎ ಶ್ರೀನಿವಾಸನ್ 1961-73
6.ಕ್ಯಾ.ಎಂ.ಜಿ ವಿಜಯ ಸಾರಥಿ 1973-78
7. ಎಂ.ಚಿನ್ನಸ್ವಾಮಿ 1978-90
8. ಕ್ಯಾ(ಡಾ)ಕೆ.ತಿಮ್ಮಪ್ಪಯ್ಯ 1990-98
9. ಕೆ.ಎಂ ರಾಮ್ಪ್ರಸಾದ್ 1998-07
10. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2007-10
11. ಅನಿಲ್ ಕುಂಬ್ಳೆ 2010-13
12. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2013-13
13. ಪಿ.ಆರ್ ಅಶೋಕ್ ಆನಂದ್ 2013-17
14. ಸಂಜಯ್ ಎಂ ದೇಸಾಯಿ 2017-19
15. ರೋಜರ್ ಎಂ ಬಿನ್ನಿ 2019-22
16. ರಘುರಾಮ್ ಭಟ್ 2022-2025
17. ವೆಂಕಟೇಶ್ ಪ್ರಸಾದ್ 2025-