Vidhanasoudha: ಇನ್ಮುಂದೆ ವಿಧಾನಸೌಧ ವೀಕ್ಷಣೆಗೆ ಟಿಕೆಟ್ ಶುಲ್ಕ ಕಡ್ಡಾಯ!
ರಾಜ್ಯ


ಬೆಂಗಳೂರು: ವಿಶ್ವ ಖ್ಯಾತಿ, ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧ ವೀಕ್ಷಣೆಗೆ ಇನ್ಮುಂದೆ ಟಿಕೆಟ್ ಖರೀದಿ ಕಡ್ಡಾಯ ವ್ಯವಸ್ಥೆಯನ್ನು ಮಾಡಲಾಗಿದೆ.
ಭಾನುವಾರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಸರ್ಕಾರ ನಿರ್ಧಾರಿಸಿದೆ.
ಪ್ರವಾಸೋಧ್ಯಮ ಇಲಾಖೆಯ ಮನವಿ ಮೇರೆಗೆ ಸರ್ಕಾರ ಷರತ್ತು ಬದ್ದ ಅನುಮತಿ ನೀಡಿದೆ. ನಿರ್ಧಿಷ್ಟ ಪ್ರವೇಶ ಶುಲ್ಕ ನೀಡಿ ಪ್ರವಾಸಿಗರು ವಿಧಾನಸೌಧ ನೋಡಲು ವ್ಯವಸ್ಥೆ ಮಾಡಲಾಗುತ್ತಿದೆ.
ವಿಧಾನಸೌಧ ಪ್ರವೇಶಕ್ಕೆ ಶುಲ್ಕ, ಷರತ್ತು ಮತ್ತು ನಿಬಂಧನೆಗಳು
ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಬೆಳಿಗ್ಗೆ 8.00 ರಿಂದ ಸಂಜೆ 6.00ರವರೆಗೆ ವಿಧಾನಸೌಧದ ವೀಕ್ಷಣೆಗೆ ಅವಕಾಶ ಇರಲಿದೆ. ಇದಕ್ಕಾಗಿ “Guided Tour” ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರವಾಸಿಗರು online ಮುಖಾಂತರ ticket ಪಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರವಾಸಿಗರಿಗೆ ನಿಗದಿಪಡಿಸುವ ಪ್ರವೇಶ ದರ ಜನಸ್ನೇಹಿಯಾಗಿರುವಂತೆ ಚಿಂತನೆ ನಡೆಸಲಾಗುತ್ತಿದೆ.
ವಿಧಾನಸೌಧ ಕಟ್ಟಡ/ ಉದ್ಯಾನವನಗಳು/ಪ್ರತಿಮೆಗಳಿಗೆ ಯಾವುದೇ ದಕ್ಕೆ ಉಂಟಾಗದಂತೆ ಎಚ್ಚರಿಕ ವಹಿಸತಕ್ಕದ್ದು ಹಾಗೂ ಈ ಕುರಿತು ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯು ಕ್ರಮವಹಿಸತಕ್ಕದ್ದು ಎಂಬ ಪ್ರಸ್ತಾವನೆ ಸಲ್ಲಿಸಲಾಗಿದೆ.