ಜನಮೆಚ್ಚಿದ ಪಶುವೈದ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ, ಬೆಳ್ಳಿರಥದಲ್ಲಿ ಮೆರವಣಿಗೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಹದಿನೈದು ವರ್ಷಗಳ ಕಾಲ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಜನಮೆಚ್ಚುಗೆ ಪಡೆದಿದ್ದ ಪಶುವೈದ್ಯಾಧಿಕಾರಿಗಳಾದ ಡಾ.ಸತ್ಯನಾರಾಯಣ ಬಡ್ತಿಯೊಂದಿಗೆ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿರುವ ಹಿನ್ನೆಲೆ ಸ್ಥಳಿಯ ಯುವಕರ ತಂಡ ಆತ್ಮೀಯವಾಗಿ ಬೀಳ್ಕೊಟ್ಟರು.
ಭಾನುವಾರ ಸಂಜೆ ಚಿಕ್ಕಬೆಳವಂಗಲದ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ವೈದ್ಯಾಧಿಕಾರಿ ಸತ್ಯನಾರಾಯಣ ರನ್ನ ಹೊತ್ತ ಬೆಳ್ಳಿರಥವು ಮಂಗಳವಾದ್ಯಗಳು, ಕಳಸಗಳೊಂದಿಗೆ ಗ್ರಾಮದ ಬಸ್ ನಿಲ್ದಾಣದಿಂದ ಹೊರಟು ರಾಜಬೀದಿಗಳಲ್ಲಿ ಮೆರವಣಿಗೆ ಸಾಗಿತು, ಈ ಸಮಾರಂಭದಲ್ಲಿ ಚಿಕ್ಕಬೆಳವಂಗಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖೆಯಲ್ಲಿ ಸೇರಿದ್ದರು.
ಈ ವೇಳೆ ನಿತೀಶ್, ಅಶೋಕ್, ಅರುಣ್, ಮಧು, ಮನೋಜ್, ಗಿರೀಶ್, ಲಕ್ಷ್ಮೀಶ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

