ಮಧುಮೇಹ ಜಾಗೃತಿಗೆ ವಾಕಥಾನ್‌: ಮೆಡಿಕವರ್ ಆಸ್ಪತ್ರೆ ವತಿಯಿಂದ ಹೆಲ್ತ್ ಕಾರ್ಡ್ ವಿತರಣೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/14/20251 min read

ಮಹದೇವಪುರ: ಡಯಾಬಿಟಿಸ್ ನಿಯಂತ್ರಣಕ್ಕಾಗಿ ಮೆಡಿಕವರ್ ಆಸ್ಪತ್ರೆ ಸಹಯೋಗದಲ್ಲಿ, ಪೋರ್ಸ್ ಜಿ ಡಬ್ಲ್ಯೂ ವತಿಯಿಂದ ಕನ್ನಮಂಗಲ ಅಟಲ್ ಬಿಹಾರಿ ಬೊಟಾನಿಕಲ್ ಗಾರ್ಡನ್ ಬಳಿ ವಾಕಥಾನ್ ಆಯೋಜಿಸಲಾಗಿತ್ತು. ಸಾವಿರಾರು ಜನರು ವಾಕಥಾನ್ ನಲ್ಲಿ ಭಾಗವಹಿಸಿದ್ದರು. ವಾಕಥಾನ್ ಗೆ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ನಿಯಮಿತ ಆಹಾರ ಹಾಗೂ ವ್ಯಾಯಾಮ, ಉತ್ತಮ ಜೀವನಶೈಲಿ ಹಾಗೂ ಆರೋಗ್ಯ ತಪಾಸಣೆಗೆ ಒತ್ತು ನೀಡುವುದರಿಂದ ಮಧುಮೇಹದ ಅಪಾಯದಿಂದ ಪಾರಾಗಬಹುದು ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ತಿಳಿಸಿದರು

ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳು ಹೆಚ್ಚುತ್ತಿರುವುದು ಶ್ಲಾಘನೀಯ. ಮೆಡಿಕವರ್ ಆಸ್ಪತ್ರೆ ಕೈ ಜೋಡಿಸಿರುವುದರಿಂದ ಹೆಚ್ಚಿನ ಜನರಿಗೆ ಇದರ ಉಪಯೋಗ ಸಿಗಲಿದೆ ಎಂದು ಹೇಳಿದರು.

ಈ ವಾಕಥಾನ್ ಗೆ ವೈಟ್ ಫೀಲ್ಡ್ ಮೆಡಿಕವರ್ ಆಸ್ಪತ್ರೆ ಮೇಡಿಕಲ್ ಪಾರ್ಟನರ್(ವೈದ್ಯಕೀಯ ಸಹಯೋಗ) ವಹಿಸಿದ್ದು ಇದೇ ಸಂದರ್ಭದಲ್ಲಿ ಪೋರ್ಸ್ ಜಿಡಬ್ಲ್ಯೂ ಅಸೋಸಿಯೇಷನ್ ನ 30 ಸಾವಿರ ಮಂದಿಗೆ ಮೆಡಿಕವರ್ ಆಸ್ಪತ್ರೆ ವತಿಯಿಂದ ಮೆಡಿಕವರ್ ಹೆಲ್ತ್ ಕಾರ್ಡ್ ಅನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ರವರು ಅನಾವರಣ ಗೊಳಿಸಿದರು.

ಮಧುಮೇಹ (ಡಯಾಬಿಟೀಸ್) ಖಾಯಿಲೆಯಿಂದ ಬಳಲುತ್ತಿರುವವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕನ್ನಮಂಗಲ ಅಟಲ್ ಬಿಹಾರಿ ಬೊಟಾನಿಕಲ್ ಪಾರ್ಕ್ ನಲ್ಲಿ “ForceGW” ವತಿಯಿಂದ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

3 ಕಿಮೀ ನಡಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಮತ್ತು ಕಾರ್ಯಕ್ರಮದಲ್ಲಿ ವೈದ್ಯಕೀಯ ಸಹಯೋಗವನ್ನು ವೈಟ್ ಫೀಲ್ಡ್ ಮೆಡಿಕವರ್ ಆಸ್ಪತ್ರೆ ವಹಿಸಿದ್ದು, 30,000 ಮೆಡಿಕವರ್ ಹೆಲ್ತ್ ಕಾರ್ಡ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೆಡಿಕವರ್ ಆಸ್ಪತ್ರೆ ಮುಖ್ಯಸ್ಥ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.