ಪುರಾತನ ಕಲ್ಯಾಣಿಯಲ್ಲಿ ನೀರಿನ ಮೂಲ ಪತ್ತೆ , ಚೋಳರ ಕಾಲದ ಕಲ್ಯಾಣಿಗೆ ಮತ್ತೆ ಪುನರ್ಜೀವನ.
ಸ್ಥಳೀಯ ಸುದ್ದಿ


ಮಹದೇವಪುರ: (ಬಿದರಹಳ್ಳಿ): ಕೆಸರು ಮಣ್ಣು ತುಂಬಿಕೊಂಡು ಅಸ್ತಿತ್ವ ಕಳೆದುಕೊಂಡಿದ ಚೋಳರ ಕಾಲದ ಬಿದರಹಳ್ಳಿಯ ಕಾಶಿ ಭಾವಿ ಕಲ್ಯಾಣಿ ಜೀರ್ಣೋದ್ಧಾರ ವೇಳೆ ನೀರಿನ ಒಳ ಹರಿವು ಕಂಡುಬಂದಿದ್ದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆಶ್ಚರ್ಯ ಉಂಟುಮಾಡಿದೆ.
ಕಲ್ಯಾಣಿ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕೆರೆ ಕಾಲುವೆಗಳಿಲ್ಲ. ಕೇವಲ 25 ಅಡ್ಡಿ ಆಳದಲ್ಲಿ ಕೊಳವೆ ಮಾದರಿಯ ಎರಡು ಕಲ್ಲಿನ ಮಧ್ಯೆ ಸ್ವಚ್ಛಂದ ನೀರು ಹರಿದು ಬರುತ್ತಿರುವುದು ಆಶ್ಚರ್ಯ ವಾಗಿದೆ.
ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಬರುತ್ತಿದ್ದಾರೆ.ನೀರನ್ನು ಕುಡಿದು ಭಕ್ತಿಯನ್ನ ಮೆರೆಯುತ್ತಿದ್ದಾರೆ.ನೀರು ತುಂಬಾ ಸ್ವಚ್ಛವಾಗಿದ್ದು ನೀರು ಕುಡಿಯಲು ಸಿಹಿಯಾಗಿದೆ ಎಂದು ಜನ ಹೇಳುತ್ತಿದ್ದಾರೆ.ನೀರು ಎಲ್ಲಿಂದ ಬರುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ನೀರಿನ ಮೂಲ ಪವಾಡವಾಗಿದೆ ಉಳಿದಿದೆ.
800 ವರ್ಷಗಳ ಇತಿಹಾಸದ ಕಲ್ಯಾಣಿ:
ಕಲ್ಯಾಣಿಗೆ ಸುಮಾರು 8 ಶತಮಾನಗಳ ಇತಿಹಾಸವಿದೆ.ನೂರಾರು ವರ್ಷಗಳ ಹಿಂದೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿಗಾಗಿ ಕಲ್ಯಾಣಿಯೇ ಆಸರೆಯಾಗಿತ್ತು.
ಚೋಳರ ಕಾಲದ ವಾಸ್ತುಶಿಲ್ಪ ಶೈಲಿಯಲ್ಲಿ ಬಿದರಹಳ್ಳಿಯಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ನಿರ್ಮಿಸಿರುವ ಕುರುಹುಗಳಿವೆ. ಅದೇ ಕಾಲಘಟ್ಟದಲ್ಲಿ ಬಿದರಹಳ್ಳಿ ಗ್ರಾಮದಲ್ಲಿ ಎರಡು ಕಲ್ಯಾಣಿಗಳನ್ನು ನಿರ್ಮಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲನೆ ಮಾಡಲು ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಗ್ರಾಮದ ಮುಖಂಡ ನಟರಾಜ್ ತಿಳಿಸಿದರು.
ಪುರಾತನ ಕಲ್ಯಾಣಿಯನ್ನು ಗ್ರಾಮ ಪಂಚಾಯತಿ ಹಾಗೂ ಎನ್ ಜಿ ಒ ಸಹಕಾರದಲ್ಲಿ ಜೀರ್ಣೋದ್ಧಾರ ಮಾಡಲು ಸ್ವಚ್ಛಗೊಳಿಸಿದಾಗ ಅಚ್ಚರಿ ಕಂಡುಬಂದಿದೆ. ನೀರಿನ ಹರಿವು ಕಂಡು ಎಲ್ಲೋ ಕೃತಕವಾಗಿ ಹರಿತಿರಬಹುದೆಂದು ಭಾವಿಸಲಾಗಿತ್ತು.ಆದರೆ ನೀರು ಒಂದು ವಾರ ಕಳೆದರೂ ನಿಲ್ಲದಾಗ ನಮ್ಮಗೂ ವಿಸ್ಮಯಮೂಡಿಸಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೇಶ್ ಹೇಳಿದರು.
ಸದ್ಯಕ್ಕೆ ಪುರಾತನ ಕಲ್ಯಾಣಿಗೆ ಕಾರ್ಯಕಲ್ಪ ನಡಿತಿದೆ ನೀರಿನ ಮೂಲ ಗ್ರಾಮದ ಜನರಲ್ಲಿ ಅಚ್ಚರಿ ಜೊತೆಗೆ ದೇವರಿನ ಮೇಲೆ ಭಕ್ತಿಯನ್ನು ಹೆಚ್ಚಿಸಿದೆ. ಈ ಪುರಾತನ ಕಲ್ಯಾಣಿ ಹಾಗೂ ದೇಗುಲ ಆದಷ್ಟು ಶೀಘ್ರದಲ್ಲಿ ಜೀರ್ಣೋದ್ಧಾರವಾಗಿ ಭಕ್ತರ ದರ್ಶನಕ್ಕೆ ಹಾಗೂ ನಮ್ಮ ಪೂರ್ವಜರ ಜ್ಞಾನ ಮುಂದಿನ ಪೀಳಿಗೆಯವರಿಗೂ ತಿಳಿಯುವಂತಾಗಲಿ ಎಂಬುವುದೇ ಎಲ್ಲಾರ ಆಶಯವಾಗಿದೆ.

