ಕಾಲ್ತುಳಿತದಲ್ಲಿ ಮೃತಪಟ್ಟ RCB ಅಭಿಮಾನಿಗಳು ಯಾರು? 11 ಜನರ ಪೂರ್ಣ ವಿವರ ಇಲ್ಲಿದೆ
ರಾಜ್ಯ


ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ.ಟ್ರೋಪಿ ಎತ್ತಿ ಹಿಡಿದ 18 ವರ್ಷಗಳ ನಂತರದ ಸಂಭ್ರಮ ಕೇವಲ 18 ಗಂಟೆಯೂ ಇರಲಿಲ್ಲ ಎಂಬುವುದು ನೋವಿನ ಸಂಗತಿಯಾಗಿದೆ.
ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಆರ್ಸಿಬಿ ತಂಡ ಬುಧವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿತ್ತು.
ಮೊದಲಿಗೆ ರಾಜ್ಯ ಸರ್ಕಾರದ ವತಿಯಿಂದ ತಂಡದ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದ ಸನ್ಮಾನ ಆದ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲೂ ಸಹ ಲಕ್ಷಗಟ್ಟಲೆ ಮಂದಿ ಅಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಇದ್ದುದರಿಂದ ಬೆಳಗಿನಿಂದಲೇ ಲಕ್ಷಾಂತರ ಅಭಿಮಾನಿಗಳು ರಾಜ್ಯಾದ್ಯಂತ ಆಗಮಿಸಿದ್ದರು. ಹೀಗೆ ಬಂದವರು ಸ್ಟೇಡಿಯಂಗೆ ಪ್ರವೇಶಿಸುವಾಗ ನೂಕುನುಗ್ಗಲು ಆಗಿದ್ದು, ಕಾಲುತುಳಿತಕ್ಕೆ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ:
ಭೂಮಿಕ್, 20 ವರ್ಷ (ನೆಲಮಂಗಲ)
ಸಹನ 19 ವರ್ಷ (ಕೋಲಾರ)
ಪೂರ್ಣಚಂದ್, 32 ವರ್ಷ (ಮಂಡ್ಯ)
ಚಿನ್ಮಯಿ, 19 ವರ್ಷ
ದಿವ್ಯಾಂಶಿ, 13 ವರ್ಷ
ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)
ದೇವಿ, 29 ವರ್ಷ
ಶಿವಲಿಂಗ್, 17 ವರ್ಷ
ಮನೋಜ್, 33 ವರ್ಷ (ತುಮಕೂರು)
ಅಕ್ಷತಾ, (ಮಂಗಳೂರು)
ಮೃತರ ಪೈಕಿ ಶ್ರವಣ್, ಭೂಮಿಕ್, ಮನೋಜ್, ಚಿನ್ಮಯಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯರಾತ್ರಿಯೇ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಮೊಟಕು
ವಿಧಾನಸೌಧದ ಸಮಾರಂಭ ಮುಗಿಯುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ದುರವಂತವೇ ನಡೆದು ಹೋಗಿದ್ದರಿಂದ ಸಂಭ್ರಮ ಮಾಯವಾಗಿತ್ತು. ಕೇವಲ 15 ನಿಮಿಷಳಲ್ಲೇ ಕಾರ್ಯಕ್ರಮ ಮುಗಿಸಿದರು.
18 ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿದ್ದರಿಂದ ಇಡೀ ಕರುನಾಡು ಸಂಭ್ರಮದಲ್ಲಿ ತೇಲಾಡಿದ್ದರೆ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿದಿಂದಾದ ಸಾವುಗಳು ರಾಜ್ಯದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಇಲ್ಲಿ ಯಾರ ತಪ್ಪು, ಯಾರು ಈ ಸಾವಿಗೆ ಹೊಣೆ,ಯಾಕೆ ಜೀವನಕಿಂತ ಇಷ್ಟು ಅಭಿಮಾನ ತೋರಿಕೆ ಎಂಬುದಕಿಂತ ಹನ್ನೋಂದು ಜನರ ಜೀವ, ಜೀವನ ಕೊನೆಯಾಗಿದೆ.ಅಷ್ಟು ಜನರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮತ್ತೋಮ್ಮೆ ಆರ್ ಸಿ ಬಿ ಕಪ್ ಗೆಲ್ಲಬಹುದು ಮತ್ತೆ ಸಂಭ್ರಮ ಮಾಡಬಹುದು ಆದರೆ..ಹೊದ ಜೀವಗಳು ಮಾತ್ರ ಬರಲ್ಲ....ಅಭಿಮಾನಿಗಳು ಅಭಿಮಾನ ಇಟ್ಟುಕೊಳ್ಳಬೇಕು ಹುಚ್ಚು ಅಭಿಮಾನ ಇಟ್ಟುಕೊಳ್ಳಬಾರದು. ಸರ್ಕಾರವಾಗಲೀ,ಕೆಎಸ್ ಸಿಎ, ಬಿಸಿಸಿಐ ಆಗಲೀ ಜನರಿಗೆ ಪೂರ್ವ ಸಿದ್ದತೆಗಳು ಇಲ್ಲದೆ ಯಾವುದೇ ಕಾರ್ಯಕ್ರಮ ಬಾರದಾಗಿತ್ತು.ಈ ದುರಂತ ಘಟನೆಯನ್ನ ಎರಡು ಮೂರು ದಿನ ಎಲ್ಲಾರೂ ಮರೆತು ಬಿಡಬಹುದು ಆದರೆ ಪ್ರತಿ ವರ್ಷ ಐಪಿಎಲ್ ಪಂದ್ಯ ಆರಂಭವಾದಾಗ ಹನ್ನೋಂದು ಮಂದಿ ಜೀವ ಕಳೆದುಕೊಂಡವರ ಮನೆಗಳಲ್ಲಿ ಮಾತ್ರ ಶೋಕ ಆವರಿಸುತ್ತೆ