ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ- ಹ*ತ್ಯೆಗೈದು ಶವವನ್ನ ಸುಟ್ಟ ಹೆಂಡತಿ..!

ಕ್ರೈಮ್

ಧರ್ಮ ಬಸವನಪುರ.

11/28/20251 min read

ಬೆಂಗಳೂರು : ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಅಪರಿಚಿತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ (Crime news) ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಪತ್ನಿಯೇ ಪ್ರಿಯಕರನೊನೆ ಸೇರಿಕೊಂಡು ಹತ್ಯೆಗೈದಿದ್ದಾಳೆ ಎಂದು ತಿಳಿದುಬಂದಿದೆ.

ಬಸವರಾಜು ಹಾಗೂ ಶರಣಮ್ಮ ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಾಲ್ಕು ವರ್ಷದ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ವೀರಭದ್ರ ತಂದೆ ಬಳಿ ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು ಹಾಗೂ ಶರಣಮ್ಮ ಬಳಿಕ ಆ ಕೆಲಸ ಬಿಟ್ಟು ಕೆಲಸಗಾರರನ್ನು ತಂದು ಬಿಡುವ ದಂಧೆಗೆ ಕೈ ಹಾಕಿದ್ದ. ಇದೇ ವೇಳೆ ಈ ಮಧ್ಯೆ ಶರಣಮ್ಮ ಹಾಗೂ ವೀರಭದ್ರ ನಡುವೆ ಸಂಬಂಧ ಬೆಳೆದಿತ್ತು. ಈ ಸಂಬಂಧ ಒಬ್ಬರನ್ನೊಬ್ಬರು ಬಿಟ್ಟಿರಲಾರಷ್ಟು ಮುಂದುವರೆದಿತ್ತು. ಒಂದು ತಿಂಗಳ ಹಿಂದೆ ಬಸವರಾಜುನ ಕೊಲೆ ಮಾಡುವ ಪ್ಲಾನ್ ಮಾಡಿದ್ದರು. ಅದರಂತೆ ಕಳೆದ ಶುಕ್ರವಾರ ಬಸವರಾಜು ಮನೆಯಲ್ಲಿ ಮಧ್ಯಪಾನ ಮಾಡಿ ಮಲಗಿದ್ದ. ಈ ವೇಳೆ ಶರಣಮ್ಮ ವೀರಭದ್ರ ನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದರು. ಆಗಲೂ ಸಾಯದಿದ್ದಾಗ, ದೇಹಕ್ಕೆ ನೇಣುಹಾಕಿ ಕೊಂದಿದ್ದರು. ಬಳಿಕ ಮೃತದೇಹವನ್ನು ವಿಲೇವಾರಿ ಮಾಡಲು ಮಾಡಲು ಅನಿಲ್ ಎಂಬಾತನನ್ನ ಕರೆದುಕೊಂಡು ಬಂದಿದ್ದ ವೀರಭದ್ರ, ಎಲ್ಲರೂ ಮಲಗಿರುವುದನ್ನ ಗಮನಿಸಿ ತಡರಾತ್ರಿ 12:30 ಕ್ಕೆ ಮೃತದೇಹವನ್ನು ಹೊರಗೆ ಒಯ್ದಿದ್ದ.

ಮನೆಯಲ್ಲಿದ್ದ ಹಳೆ ಬಟ್ಟೆ ಗಳಲ್ಲಿ ಸುತ್ತಿ ಮೃತದೇಹ ಚೀಲ ದಲ್ಲಿ ಹಾಕಿಕೊಂಡು, ಒಂದು ಲೀಟರ್ ಪೆಟ್ರೋಲ್ ತೆಗೆದುಕೊಂಡು ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿದ್ದ. ಪತ್ತೆಯಾಗಿದ್ದ ಮೃತ ದೇಹವನ್ನು ಕಂಡು ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಬೆಂಬೆತ್ತಿ ಮೂವರೂ ಆರೋಪಿಗಳನ್ನು ಬಂಧಿಸಲುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.