ದೊಡ್ಡಬಳ್ಳಾಪುರ: ತಾಲ್ಲೂಕಿನ ಆರೂಢಿ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಸಮೃದ್ದವಾಗಿ ಬೆಳೆದುನಿಂತಿದ್ದ ಅಡಿಗೆ, ತೆಂಗು, ಜಮ್ಮು ನೇರಳೆ ಗಿಡಗಳು ಸಂಪುರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಇಂದು ನಡೆದಿದೆ.
ಈ ಜಮಿನು ಬೆಂಗಳೂರು ಮೂಲದ ನಾಗರಾಜು ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಘಟನೆಯಿಂದ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಮ್ಮು ನೇರಳೆ ಮರಗಳು, ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಅಲ್ಲದೆ 5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕಕ್ಕೆ ಅಳವಡಿಸಿದ್ದ ಪೈಪ್ ಲೈನ್ ಸುಟ್ಟು ಭಸ್ಮವಾಗಿದೆ. ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯ ಆರೋಪಿಸಿದ್ದಾರೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದರು ಸಂಪರ್ಕ ಸಾಧ್ಯವಾಗಿಲ್ಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.