Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಎಣಿಕೆ: 39 ಲಕ್ಷಕ್ಕು ಅಧಿಕ ಮೊತ್ತದ ಕಾಣಿಕೆ ಸಂಗ್ರಹ

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಎಣಿಕೆ: 39 ಲಕ್ಷಕ್ಕು ಅಧಿಕ ಮೊತ್ತದ ಕಾಣಿಕೆ ಸಂಗ್ರಹ

by Raghavendra H A
0 comments

ದೊಡ್ಡಬಳ್ಳಾಪುರ; ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಇಂದು ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ 39.49,549 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಗುರುವಾರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ 39.49,549 ನಗದು, 04 ಗ್ರಾಂ ಚಿನ್ನ, 830 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತ ಪಿ. ದಿನೇಶ್, ದೇವಾಲಯದ ಉಪ ಕಾರ್ಯದರ್ಶಿ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕ ಗುರುರಾಜ್ ಶರ್ಮ, ಸೂಪರ್ ಡೆಂಟ್ ಪ್ರಮೋದ್, ಪ್ರಾಧಿಕಾರ ಸದಸ್ಯರಾದ ಜೆ.ಎನ್.ರಂಗಪ್ಪ, ಎಸ್, ರವಿ, ಲಕ್ಷ್ಮನಾಯಕ್, ಆರ್. ವಿ.ಮಹೇಶ್, ಕುಮಾ‌ರ್, ಹೇಮಲತಾ ರಮೇಶ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

You may also like

Leave a Comment