Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ: ಮಹಿಳೆಗೆ ಕೋಳಿ ಸಾಗಿಸುವ ವಾಹನ ಡಿಕ್ಕಿ, ಮಹಿಳೆ ಸಾವು, ಡ್ರೈವರ್ ಪೊಲೀಸರಿಗೆ ಶರಣು

ದೊಡ್ಡಬಳ್ಳಾಪುರ: ಮಹಿಳೆಗೆ ಕೋಳಿ ಸಾಗಿಸುವ ವಾಹನ ಡಿಕ್ಕಿ, ಮಹಿಳೆ ಸಾವು, ಡ್ರೈವರ್ ಪೊಲೀಸರಿಗೆ ಶರಣು

by Raghavendra H A
0 comments

ದೊಡ್ಡಬಳ್ಳಾಪುರ: ಕೋಳಿ ಸಾಗಿಸುವ ವಾಹನವೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೂ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಮಾಮ್ ಗೇಟ್ ಬಳಿ ಮಾ.26ರ ಗುರುವಾರ ರಾತ್ರಿ 9.ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಲಕ್ಷ್ಮೀದೇವಮ್ಮ (60)ವರ್ಷ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ಕೋಲಾರ ಮೂಲದವರಾಗಿದ್ದು ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.

ಅಪಘಾತವೆಸಗಿದ ಡ್ರೈವರ್ ಭಯಭೀತನಾಗಿ ನೇರವಾಗಿ  ನಗರ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment