Wednesday, April 15, 2026
Home ಬೆಂಗಳೂರು ನಗರಜನ ಸಹಯೋಗ್ ಸಂಘಟನೆ ವತಿಯಿಂದ ಶ್ರೀರಾಮ ನವಮಿ ರಥಯಾತ್ರೆ.. ಬೀದಿ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆ.

ಜನ ಸಹಯೋಗ್ ಸಂಘಟನೆ ವತಿಯಿಂದ ಶ್ರೀರಾಮ ನವಮಿ ರಥಯಾತ್ರೆ.. ಬೀದಿ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆ.

by Dharmaraju
0 comments

ಮಹದೇವಪುರ: ಮಹದೇವಪುರ: ಶ್ರೀ ರಾಮನವಮಿ ಅಂಗವಾಗಿ ಹೂಡಿ ಗ್ರಾಮದಲ್ಲಿ ಜನ ಸಹಯೋಗ ಸಂಘಟನೆ ಕಾರ್ಯಕರ್ತರು ಶ್ರೀ ರಾಮನ ಮೂರ್ತಿಯನ್ನು ತೆರೆದ ಪಲ್ಲಕ್ಕಿ ವಾಹನದಲ್ಲಿಟ್ಟುಕೊಂಡು ಶ್ರೀ ರಾಮನಿಗೆ ಜೈ ಕಾರ ಹಾಕುತ್ತಾ ಸಾವಿರಾರು ಯುವಕರು ಬೈಕ್ ರ್ಯಾಲಿ ಕೈಗೊಳ್ಳುವ ಮೂಲಕ ಅದ್ದೂರಿಯಾಗಿ ಶ್ರೀ ರಾಮನ ರಥಯಾತ್ರೆ ನಡೆಸಿದರು.

ಮೊದಲಿಗೆ ಹೂಡಿ ಸ್ಪೋರ್ಟ್ಸ್ ಕ್ಲಬ್ ಬಳಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ವಿಷೇಶ ಪೂಜೆ ಸಲ್ಲಿಸಿ ಶ್ರೀ ರಾಮನ ರಥಯಾತ್ರೆಗೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು, ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಗಳು ಸಮಾಜಕ್ಕೆ ದಾರಿ ತೋರಿಸುವಂತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನ ಸಹಯೋಗ್ ಸಂಘಟನ್ ಅಧ್ಯಕ್ಷ ಬೀರ್ ಬಹದ್ದೂರ್ ಸಿಂಗ್, ಕಳೆದ ಎಂಟು ವರ್ಷಗಳಿಂದ ಶ್ರೀರಾಮನವಮಿ ಆಚರಣೆಯನ್ನು ಭವ್ಯವಾಗಿ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದರು.

ಶೋಭಾಯಾತ್ರೆಯು ಹೂಡಿ ಪ್ರದೇಶದಿಂದ ಪ್ರಾರಂಭವಾಗಿ ತಿಗಳರಪಾಳ್ಯ, ರಾಜಪಾಳ್ಯ, ಐಟಿಪಿಎಲ್, ವೈಟ್‌ಫೀಲ್ಡ್, ವರ್ತೂರು ಕೊಡಿ, ಕುಂದಲಹಳ್ಳಿ ಗೇಟ್,ಮಾರತಹಳ್ಳಿ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು.

ಈ ವೇಳೆ ನೂರಾರು ಯುವಕರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಭಕ್ತಿಪೂರ್ವಕವಾಗಿ ಪಾಲ್ಗೊಂಡರು.
ಅಲ್ಲಲ್ಲಿ ಮಜ್ಜಿಗೆ, ಪಾನಕ, ಕಮೂಲಕರಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹದೇವಪುರ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ ಗ್ರಾಮಾಂತರ ಅಧ್ಯಕ್ಷ ಹೂಡಿ ಪಿಳ್ಳಪ್ಪ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಲ್. ರಾಜೇಶ್
ಸಂಘದ ಉಪಾಧ್ಯಕ್ಷರಾದ ರಾಜೇಶ್ ಕುಮಾರ್,
ಸುನೀಲ್ ಸಿಂಗ್, ಪ್ರಭಾರಿ ಸಂತೋಷ್ ಚೌಧರಿ, ಪಂಕಜ್ ಠಾಕೂರ್, ಹಾಗೂ ಸಂಘಟನೆಯ ಇತರೆ ಸದಸ್ಯರು ಹಾಜರಿದ್ದರು.

You may also like

Leave a Comment