Wednesday, April 15, 2026
Home Uncategorizedಬಸವನಪುರ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ರಾಮನವಮಿ ಆಚರಣೆ.

ಬಸವನಪುರ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ರಾಮನವಮಿ ಆಚರಣೆ.

by Dharmaraju
0 comments

ಕೆ.ಆರ್.ಪುರ: ಶ್ರೀ ರಾಮನವಮಿ ಪ್ರಯುಕ್ತ ಕ್ಷೇತ್ರದ ವಿವಿಧೆಡೆ ರಾಮನವಮಿ ಭಕ್ತಿ-ಭಾವದಿಂದ ಜರುಗಿತು. ಬಸವನಪುರ ಅಭಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನಕ್ಕೆ ಭಕ್ತರು ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ಭೇಟಿ ನೀಡಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಆಂಜನೇಯ ಸ್ವಾಮಿಗೆ ಬಂಗಾರ ಲೇಪಿತ ವಜ್ರಾಂಗಿ ಕವಚ ಅಲಂಕಾರ,ದಿಂಡು ಹೂವಿನ ಅಲಂಕಾರದಿಂದ ಆಂಜನೇಯ ಸ್ವಾಮಿಯು ಕಂಗೊಳಿಸುತ್ತಿತ್ತು, ಮುಂಜಾನೆಯೇ ಅಭಿಷೇಕ, ಹೋಮ ಹವನ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ಬಸವನಪುರ ಸುತ್ತಮುತ್ತಲಿನ ಗ್ರಾಮಗಳಾದ ಗಾಯಿತ್ರಿ ಬಡವಣೆ,ಅಜೀತ್ ಲೇಔಟ್, ವಿಜಯಬ್ಯಾಂಕ್ ಕಾಲೋನಿ, ಸ್ವತಂತ್ರನಗರ,ಅಯ್ಯಪ್ಪ ನಗರ,ಪ್ರಿಯದರ್ಶಿನಿ ಬಡಾವಣೆ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

ಬೆಳಗ್ಗೆ ಮಹಾಮಂಗಳಾರತಿ ಮಾಡಿ ಪಾನಕ,ಮಜ್ಜಿಗೆ, ಕೋಸಂಬರಿ ಮತ್ತು ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ನಡೆಯಿತು. ರಸ್ತೆಯಲ್ಲಿ ಸಂಚರಿಸುವ ನೂರಾರು ಜನ ಹಾಗೂ ವಾಹನ ಸವಾರರು ಪ್ರಸಾದವನ್ನ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್,ಗೋವಿಂದ,ಗಂಗಧರ್,ವೆಂಕಟಪ್ಪ,ಕುಪ್ಪಸ್ವಾಮಿ, ಮುನಿಸ್ವಾಮಿ ರೆಡ್ಡಿ, ನಾರಯಣಸ್ವಾಮಿ,ವಿ ಮಂಜುನಾಥ್, ವಿ.ಸುಭ್ರಮಣಿ,ಗಂಗು,ವಿಜಿ ಪ್ರತಾಪ್,,ಮೋಹನ್ ಮತ್ತಿತರರು ಇದ್ದರು.

You may also like

Leave a Comment