Wednesday, April 15, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ ನಗರದಲ್ಲಿ ಅದ್ದೂರಿ ಶ್ರೀರಾಮೋತ್ಸವ, ಶೋಭಾಯಾತ್ರೆಯಲ್ಲಿ ಭಕ್ತರಿಂದ ಜೈಕಾರ

ದೊಡ್ಡಬಳ್ಳಾಪುರ ನಗರದಲ್ಲಿ ಅದ್ದೂರಿ ಶ್ರೀರಾಮೋತ್ಸವ, ಶೋಭಾಯಾತ್ರೆಯಲ್ಲಿ ಭಕ್ತರಿಂದ ಜೈಕಾರ

by Raghavendra H A
0 comments

ದೊಡ್ಡಬಳ್ಳಾಪುರ; ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀರಾಮನವಮಿ ಅಂಗವಾಗಿ ಅದ್ದೂರಿಯಾಗಿ ಶ್ರೀರಾಮ ಶೋಭಾಯಾತ್ರೆ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್‌ ಬಜರಂಗ ದಳ ವತಿಯಿಂದ ನಗರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು ಶ್ರೀರಾಮ ಜೈಕಾರ ಹಾಕುವ ಮೂಲಕ ಭಾಗಿಯಾಗಿದ್ದಾರೆ‌.

ಶ್ರೀರಾಮೋತ್ಸವದ ಅಂತಿಮ ದಿನವಾದ ಇಂದು ಶ್ರೀರಾಮ, ಆಂಜನೇಯ, ಡಾ.ಬಿ.ಆರ್ ಅಂಬೇಡ್ಕರ್, ಇಮ್ಮಡಿ ಪುಲಕೇಶಿ, ಶಿವಾಜಿ, ಶಿವ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆ, ವೃತ್ತ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಗುತ್ತಿದೆ.

ಈ ಶೋಭಾಯಾತ್ರೆ ಹಿನ್ನೆಲೆ ಶೋಭಾಯಾತ್ರೆ ಮುಗಿಯುವವರೆಗೂ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ.

You may also like

Leave a Comment