Wednesday, April 15, 2026
Home ಅಪರಾಧ ಸುದ್ದಿದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

ದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

by Raghavendra H A
0 comments

ದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಕಣ್ಣಿಗೆ ಕಾರದಪುಡಿ ಎರಚಿ ದೊಣ್ಣೆಗಳಿಂದ ಹಲ್ಲೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದಡಘಟ್ಟುಮಡಗು ಗ್ರಾಮದಲ್ಲಿ  ಇಂದು ನಡೆದಿದೆ.

ವಕೀಲ ಪ್ರತಾಪ್ ಸೇರಿದಂತೆ ಹಲವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆದಿದೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಹೊಸಹಳ್ಳಿ ಪೊಲೀಸರು ಗಂಗಾಧರ (A1), ಲೋಕೇಶ್ (A2), ಲಿಂಗರಾಜ್ (A3), ರಕ್ಷಿತ್ (A4), ರವಿಚಂದ್ರ (A5) ಸೇರಿದಂತೆ ಒಟ್ಟು 19 ಜನರನ್ನು ಆರೋಪಿಗಳಾಗಿ ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

You may also like

Leave a Comment