186
ದೊಡ್ಡಬಳ್ಳಾಪುರ:ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದ ಪರಿಣಾಮ ಮಹಿಳೆಯ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಲನಜೋಗಿಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದಿದೆ.
ಮಜಾನ್ ಬಿ (55) ಗಾಯಗೊಂಡ ಮಹಿಳೆ ಎನ್ನಲಾಗಿದೆ. ಪಾಲನಜೋಗಿಹಳ್ಳಿ ಬಳಿ ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ ವೇಗವಾಗಿ ಬಂದ ಬೈಕ್ ರಸ್ತೆ ಬದಿ ನಿಂತಿದ್ದ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರ ಪರಿಣಾಮ ಮಹಿಳೆಯ ಕಾಲು ಮುರಿದಿದೆ.
ಎರಡು ದಿನಗಳ ಹೊಂದೆಯಷ್ಟೆ ಇದೇ ರಸ್ತೆಯಲ್ಲಿ KSRTC ಬಸ್ ಮತ್ತು ಬೈಕ್ ಸವಾರನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದ, ಇಂದು ಕೂಡ ಅಪಘಾತ ಸಂಭವಿಸಿದ್ದು ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ.