ದೊಡ್ಡಬಳ್ಳಾಪುರ : ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಬಿಜೆಪಿ ಪಕ್ಷದ ನಗರಸಭಾ ಸದಸ್ಯರಾದ ಎಸ್ ಪದ್ಮನಾಭ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಪೂರಕವಾದ ಲೆಟರ್ ಹೆಡ್ ಸಾಕ್ಷಿಯಾಗಿ ನಿಂತಿದೆ.
ನಗರದ ಬಸವೇಶ್ವರ ನಗರದ 2 ನೇ ವಾರ್ಡ್ ಸದಸ್ಯರಾಗಿ ಚುನಾಯಿತರಾಗಿದ್ದ ಎಸ್ ಪದ್ಮನಾಭ ಅವರು ಜಿಲ್ಲಾಧಿಕಾರಿಗಳಿಗೆ ತಮ್ಮ ಲೆಟರ್ ಹೆಡ್ ಮುಖಾಂತರ ರಾಜೀನಾಮೆ ನೀಡಿದ್ದಾರೆ ಎನ್ನಲಾದ ಪತ್ರದಲ್ಲಿ ಸ್ವ ಇಚ್ಚೆಯಿಂದ ರಾಜಿನಾಮೆ ನೀಡಲಾಗುತ್ತಿದ್ದು ಇದನ್ನು ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ.
ಎಸ್.ಪದ್ಮನಾಭ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಲೇಟರ್ ನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ನಂತರ ಡಿಲಿಟ್ ಮಾಡಿದ್ದಾರೆ, ಫೋನ್ ಸಹ ಸಂಪರ್ಕಕ್ಕೆ ಸಿಗಗುತ್ತಿಲ್ಲ. ರಾಜೀನಾಮೆ ಲೇಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ. ಇದರೊಂದಿಗೆ ದೊಡ್ಡಬಳ್ಳಾಪುರ ಜಿಜೆಪಿ ಪಕ್ಷದಲ್ಲಿ ಆಂತರಿಕ ಕಲಹಗಳು ಉಂಟಾಗಿದ್ದು ಎಲ್ಲವೂ ಸರಿ ಇಲ್ಲ ಎಂಬುದು ತಿಳಿದುಬರುತ್ತಿದೆ.