Wednesday, April 15, 2026
Home ಜಿಲ್ಲಾ‌ಸುದ್ದಿಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು: ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು: ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

by Dharmaraju
0 comments

ಕೋಲಾರ: :- ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಮಲಗಿದ್ದವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ್ (50) ಕೊಲೆಯಾದ ವ್ಯಕ್ತಿ. ರಘು ಕೊಲೆಗೈದ ಆರೋಪಿ. ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ವೆಂಕಟೇಶ್‌ನನ್ನು ಆರೋಪಿ ರಘು ಕೊಲೆಗೈದಿದ್ದಾನೆ.

ಸಂಜೆಯಾದ್ರೆ ಕುಡಿದು ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿ ರಘು ಓಡಾಡ್ತಿದ್ದ. ಆರೋಪಿಯ ವರ್ತನೆಯಿಂದ ದೇವರಾಯಸಮುದ್ರ ಗ್ರಾಮಸ್ಥರು ಬೇಸತ್ತಿದ್ದರು ಎಂದು ಹೇಳಲಾಗಿದೆ.

ವೆಂಕಟೇಶ್ ಕೊಲೆಗೈದ ನಂತರ ದೊಣ್ಣೆಕೋಲು ಬಿಸಾಡಿ ಆರೋಪಿ ರಘು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

You may also like

Leave a Comment