Wednesday, April 15, 2026
Home ಸಿನಿಮಾನೆಲದ ಮೇಲೆ ನಿದ್ದೆ, ಎಳನೀರು ಸೇವನೆ: ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಸರಳತೆಗೆ ಫ್ಯಾನ್ಸ್ ಫಿದಾ!

ನೆಲದ ಮೇಲೆ ನಿದ್ದೆ, ಎಳನೀರು ಸೇವನೆ: ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಸರಳತೆಗೆ ಫ್ಯಾನ್ಸ್ ಫಿದಾ!

by Dharmaraju
0 comments

ಬೆಂಗಳೂರು: ಕನ್ನಡ ಚಿತ್ರರಂಗದಿಂದ ಬಾಲಿವುಡ್‌ವರೆಗೆ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕರಾಗಿ ಪಾರುಪತ್ಯ ಮೆರೆದಿರುವ ಪ್ರಭುದೇವ ಅವರು ತಮ್ಮ ಸರಳ ಜೀವನದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ನಟನಾಗಿದ್ದರೂ, ಪ್ರಭುದೇವ ಅವರು ಸಾಮಾನ್ಯ ಬಟ್ಟೆ ಧರಿಸಿ, ಯಾವುದೇ ಹಮ್ಮಿಲ್ಲದೆ ನೆಲದ ಮೇಲೆ ಕುಳಿತು ಎಳನೀರು ಕುಡಿಯುತ್ತಿರುವುದು ವಿಡಿಯೋದಲ್ಲಿದೆ.

ಅಷ್ಟೇ ಅಲ್ಲದೆ, ಐಷಾರಾಮಿ ಹಾಸಿಗೆ ಅಥವಾ ದಿಂಬಿನ ಹಂಗಿಲ್ಲದೆ ಬರಿ ನೆಲದ ಮೇಲೆ ಮಲಗಿಕೊಂಡಿರುವ ದೃಶ್ಯ ಅಭಿಮಾನಿಗಳ ಹೃದಯ ಗೆದ್ದಿದೆ. “ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರು ಮರೆಯಬಾರದು ಎಂಬುದು ಪ್ರಭುದೇವ ಅವರನ್ನು ನೋಡಿ ಕಲಿಯಬೇಕು” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

You may also like

Leave a Comment