ಚಿಕ್ಕಬಳ್ಳಾಪುರ: ಒಂದು ವರ್ಷದ ಹಿಂದೆ ನಡೆದ ಭೀಕರ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಗುರುತು ಸಿಗದಂತೆ ಮಾಡಲಾಗಿತ್ತು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 2025 ಅಕ್ಟೋಬರ್ 19 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಬಳಿ ಕಾಡಿನ ಮಧ್ಯೆ ನುಣಕಮ್ಮ ಎಂಬ ಮಹಿಳೆಯ ಶ*ವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಆಗಿತ್ತು.
ಇದೀಗ ತನಿಖೆಯಲ್ಲಿ ಅಣ್ಣನೇ ಮಗಳೇ ಕೊ*ಲೆಗಾತಿ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ನುಣಕಮ್ಮಗೆ ಗಂಡ ಮಕ್ಕಳು ಇರಲಿಲ್ಲ. ಅಣ್ಣನ ಮನೆಯಲ್ಲಿ ಇದ್ದರು. ನುಣಕಮ್ಮಳಿಗೆ ಮಗಳು ಆಗಬೇಕಿದ್ದ 32 ವರ್ಷದ ನಾಗಲಕ್ಷ್ಮಿ ಹಾಗೂ ಆಕೆಯ ಪ್ರೀಯಕರ ಆಂಧ್ರದ ಮಡಕಶಿರಾ ನಿವಾಸಿ ಅಶೋಕ್ ಕುಮಾರ್ ಜೊತೆ ಸೇರಿ ಕೊ*ಲೆ ಮಾಡಿದ್ದು ಬಯಲಾಗಿದೆ.
ಪಿಡ್ಸ್ ಬರುತ್ತಿದೆ ಎಂದು ನುಣಕಮ್ಮಳನ್ನ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ, ಬೈಕ್ನಲ್ಲಿ ಕರೆದುಕೊಂಡು ಸೆಪ್ಟೆಂಬರ್ 20 ರಂದು ಚಿಕ್ಕಬಳ್ಳಾಪುರದ ಅರಣ್ಯದಲ್ಲಿ ಕೊಂ*ದು ಶವ ಬಿಸಾಡಿ ಹೋಗಿದ್ದರು. ಚಿನ್ನಾಭರಣ ಹಾಗೂ ಚೀಟಿ ಹಣಕ್ಕೆ ಪ್ರಿಯಕರನ ಜೊತೆ ಸೇರಿ ಸ್ವಂತ ಚಿಕ್ಕಮ್ಮಳನ್ನು ನಾಗಲಕ್ಷ್ಮೀ ಕೊ*ಲೆ ಮಾಡಿದ್ದಾಳೆ.