ಬೆಂಗಳೂರು: ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ನ್ಯೂ ಬಾಲ್ಡ್ ವಿನ್ ಶಿಕ್ಷಣ ಸಮೂಹ ಸಂಸ್ಥೆಗಳ 10ನೇ ಶಾಖೆ ಕೋಗೀಲುವಿನಲ್ಲಿ ಪ್ರಾರಂಭಗೊಂಡಿದೆ.

ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಲೋಕಾರ್ಪಣೆ ಗೊಳಿಸಿ ಪೋಷಕರನ್ನುದ್ದೇಶಿಸಿ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಟಿ.ವೇಣುಗೋಪಾಲ್ ಮಾತನಾಡಿದರು.
ವಿದ್ಯೆ ಎಂದಿಗೂ ಸೇವೆಯಾಗಬೇಕೆ ಹೊರತು ವ್ಯಾಪಾರವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ನಾವು ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಕೋಗೀಲುವಿನಲ್ಲಿ ಪ್ರಾರಂಭಿಸಿದ್ದೇವೆ.
ಮಕ್ಕಳಿಗೆ ಹಸಿರಿನಿಂದ ಕೂಡಿದ ವಿಶಾಲವಾದ ಪರಿಸರ, ಅತ್ಯಾಧುನಿಕ ಕಟ್ಟಡ, ಜಾಗತಿಕ ಪಠ್ಯಕ್ರಮ, ನುರಿತ ಶಿಕ್ಷಕ ವೃಂದ, ಸುಸಜ್ಜಿತ ಕ್ರೀಡಾಂಗಣ,ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್ ರೂಮ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕೂಲ್ ಬಸ್ ಸೌಲಭ್ಯ ಜೊತೆಗೆ ಓದಿನ ಜೊತೆಗೆ ಕ್ರೀಡೆ ಮತ್ತು ಕಲೆಗೂ ಇಲ್ಲಿ ಸಮಾನ ಆದ್ಯತೆ ನೀಡುತ್ತೇವೆ ಎಂದರು.
ಈ ವೇಳೆ ನ್ಯೂ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಫೈನಾನ್ಸ್ ಡೈರೆಕ್ಟರ್ ಶ್ರೀಮತಿ ಸೌಭಾಗ್ಯವತಿ ವೇಣುಗೋಪಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಹಂಸ ಕೆ.ವೇಣುಗೋಪಾಲ್, ಸಿಇಒ ಕೀರ್ತಿ ಮಹರಾಜ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.