Saturday, July 11, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

by Raghavendra H A
0 comments

ದೊಡ್ಡಬಳ್ಳಾಪುರ; ಮಾಜಿ ಶಾಸಕ, ಹಿರಿಯ ರಾಜಕಾರಣಿ ಆರ್.ಜಿ ವೆಂಕಟಚಲಯ್ಯ ರವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. ಮೃತರಿಗೆ 90ವರ್ಷ ವಯಸ್ಸಾಗಿತ್ತು,

ಮೃತರ ಅಂತ್ಯಕ್ರಿಯೆಗೂ ಮುನ್ನ ಇವರ ಪಾರ್ಥಿವ ಶರೀರವನ್ನು ದೊಡ್ಡಬಳ್ಳಾಪುರ ತೇರದ ವಾಹನ ಮುಖಾಂತರ 11 ಗಂಟೆಗೆ ಬಾಶೆಟ್ಟಿಹಳ್ಳಿ, ರೈಲ್ವೇಸ್ಟೆಷನ್, ರಂಗಪ್ಪ ಸರ್ಕಲ್, ತೇರಿನ ಬೀದಿ, ಕೊಂಗಾಡಿಯಪ್ಪ ಕಾಲೇಜು ಮುಖ್ಯ ರಸ್ತೆ, ಇಸ್ಲಾಂಪುರ, ತಾಲೂಕ್ ಆಫೀಸ್ ಸರ್ಕಲ್, ಮಾರ್ಕೆಟ್ (ಬಸ್ ಸ್ಟಾಂಡ್ ) ಡಿಕ್ರಾಸ್, ಟಿ.ಬಿ. ಸರ್ಕಲ್,ಬಸವ ಭವನ ಮಾರ್ಗವಾಗಿ ಅವರ ಸ್ವಗ್ರಾಮ ಹಣಬೆ ಗ್ರಾಮದಲ್ಲಿ ಸಂಜೆ ಅವರ ಪಾರ್ಥಿವ ಶರಿವರವನ್ನು ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿದೆ.

You may also like

Leave a Comment