ದೊಡ್ಡಬಳ್ಳಾಪುರ: ವೃದ್ದೆಯ ಹೊಟ್ಟೆಯಲ್ಲಿದ್ದ 6 ಕೆ.ಜಿ ತೂಕದ ಗೆಡ್ಡೆಯನ್ನು ದೊಡ್ಡಬಳ್ಳಾಪುರ ತಾಯಿ ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ನೋವಿನಿಂದ ಶಾಶ್ವತ ಪರಿಹಾರ ದೊರಕಿಸಿಕೊಟ್ಟಿದ್ದಾರೆ.

70 ವರ್ಷದ ವೃದ್ದೆ ಹೊಟ್ಟೆನೋವಿನ ಸಮಸ್ಯೆಯಿಂದ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ತಪಾಸಣೆ ಒಳಪಟ್ಟಿದ್ದರು. ಈ ವೇಳೆ ಎಡಭಾಗದ ಅಂಡಾಶಯದಲ್ಲಿ ಮ್ಯೂಸಿನಸ್ ಅಡೆನೋಮಾ (ಮ್ಯೂಸಿನಸ್ ಅಡೆನೊಮಾ) ಎಂಬ ಗಡ್ಡೆ ಇರುವುದು ಖಚಿತಪಡಿಸಿಕೊಂಡ ಡಾ. ಅರ್ಚನಾ ಅವರ ನೇತೃತ್ವದ ವೈದ್ಯಕೀಯ ತಂಡವು ಎಕ್ಸ್‌ಪ್ಲೋರೇಟರಿ ಲ್ಯಾಪರೊಟಮಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಿತು. ಬಲಭಾಗದ ಅಂಡಾಶಯ ಮತ್ತು ಫಾಲೋಪಿಯನ್ ಟ್ಯೂಬ್ ತೆರವು (RSO) ಸೇರಿದಂತೆ ಅಗತ್ಯ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಯಿತು. ವೈದ್ಯಕೀಯ ತಂಡದ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಡಾ. ಅರ್ಚನಾ ಅವರೊಂದಿಗೆ ಭವ್ಯಾ, ಗಾಯತ್ರಿ ಹಾಗೂ ಸೋನಿಯಾ ಅವರು ವೈದ್ಯಕೀಯ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.