ಮಹದೇವಪುರ : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಪ್ರತ್ಯೇಕವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯವ್ಯಯವನ್ನು ಪಾಲಿಕೆಯ ಆಯುಕ್ತ ಡಿ.ಎಸ್.ರಮೇಶ್ ಮಂಡಿಸಿದ್ದು, 2026-27ನೆ ವರ್ಷದ ಪಾಲಿಕೆಯ ಆಯವ್ಯಯದ ಗಾತ್ರ ಸುಮಾರು 3,889 ಕೋಟಿ ರೂ.ಗಳಾಗಿವೆ.
2026-27ನೇ ವರ್ಷದಲ್ಲಿ ಪೂರ್ವ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3890 ಕೋಟಿಗಳಷ್ಟು ಇದ್ದು, ಒಟ್ಟು 3889.98 ಕೋಟಿ ಇರಲಿದೆ.
2026-27ನೇ ಸಾಲಿನಲ್ಲಿ 1500 ಕೋಟಿ ಆದಾಯ ಗುರಿ ಹೊಂದಲಾಗಿದ್ದು, ಹೆಚ್ಚುವರಿ ತೆರಿಗೆ ವಿಧಿಸದೆ SOP ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ-ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಗುರಿಯನ್ನು ಸಾಧಿಸಲಾಗುವುದು.
ಕಲ್ಯಾಣಕ್ಕೆ 221 ಕೋಟಿ ಮೀಸಲು
ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ 221 ಕೋಟಿ ಮೀಸಲು ಮಾಡಲಾಗಿದೆ.
1BHK ಮನೆ ಖರೀದಿಗೆ 5 ಲಕ್ಷ ಸಹಾಯಧನ.
ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ವಿದೇಶಿ ವಿದ್ಯಾಭ್ಯಾಸ ಪ್ರೋತ್ಸಾಹ.
ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ.
ಉಚಿತ ಲ್ಯಾಪ್‌ಟಾಪ್ ವಿತರಣೆ (2026-27 ವಿದ್ಯಾರ್ಥಿಗಳಿಗೆ).
ಪೌರ ಕಾರ್ಮಿಕರು & ಮಹಿಳೆಯರಿಗೆ ವಿಶೇಷ ಯೋಜನೆ
1605 ಪೌರ ಕಾರ್ಮಿಕರಿಗೆ ಆರೋಗ್ಯ ಯೋಜನೆ
1330 ಮಂದಿಗೆ ಖಾಯಂ ನೇಮಕ
ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಇ-ಸ್ಕೂಟರ್
ಉಚಿತ ಹೊಲಿಗೆ ತರಬೇತಿ & ಯಂತ್ರ ವಿತರಣೆ
ವಿಶೇಷ ಚೇತನ & ಬೀದಿ ವ್ಯಾಪಾರಿಗಳಿಗೆ ನೆರವು
ಎಲೆಕ್ಟ್ರಿಕ್ ವೀಲ್‌ಚೇರ್, ವಿಶೇಷ ದ್ವಿಚಕ್ರ ವಾಹನ
ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ
ಮೂಲಸೌಕರ್ಯಕ್ಕೆ ದೊಡ್ಡ ಒತ್ತು
ರಸ್ತೆ, ಟನಲ್, ಫ್ಲೈಓವರ್ ಅಭಿವೃದ್ಧಿಗೆ 450 ಕೋಟಿ
100 ಕಿಮೀ ಪಾದಚಾರಿ ಮಾರ್ಗ ನಿರ್ಮಾಣ
ಕೆರೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ
14 ಎಕರೆ ಭೂಸ್ವಾಧೀನ – ರಸ್ತೆ ವಿಸ್ತರಣೆಗಾಗಿ 510 ಕೋಟಿ ಮೌಲ್ಯ
ಡಿಜಿಟಲ್ ಆಡಳಿತಕ್ಕೆ ಒತ್ತು
4.5 ಲಕ್ಷ ಖಾತೆಗಳ ಡಿಜಿಟಲೀಕರಣ
ಇ-ಖಾತಾ, ಜಿಯೋ ಟ್ಯಾಗಿಂಗ್, ಬ್ಲಾಕ್‌ಚೈನ್ ಬಳಕೆ
ಆನ್‌ಲೈನ್ ಕಟ್ಟಡ ಅನುಮತಿ ವ್ಯವಸ್ಥೆ
AI ಆಧಾರಿತ ಸಿಬ್ಬಂದಿ ಹಾಜರಕ್ರಮ
ಆದಾಯ ವೃದ್ಧಿಗೆ ಕ್ರಮ:
ಆಸ್ತಿ ತೆರಿಗೆ ಬಲಪಡಿಸಿ 150 ಕೋಟಿ ಹೆಚ್ಚುವರಿ ಗುರಿ
ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ – 225 ಕೋಟಿ ನಿರೀಕ್ಷೆ
ಜಾಹೀರಾತುಗಳಿಂದ 68 ಕೋಟಿ ಆದಾಯ ಗುರಿ
ವೆಚ್ಚದ ವಿವರ (3889 ಕೋಟಿ)
ಸಿಬ್ಬಂದಿ ವೆಚ್ಚ – 302 ಕೋಟಿ
ಆಡಳಿತ ವೆಚ್ಚ – 82 ಕೋಟಿ
ಕಸ ವಿಲೇವಾರಿ – 300 ಕೋಟಿ
ನಿರ್ವಹಣೆ – 342 ಕೋಟಿ
ಆರೋಗ್ಯ & ಶಿಕ್ಷಣ – 267 ಕೋಟಿ
ಅಭಿವೃದ್ಧಿ ಕಾಮಗಾರಿಗಳು – 2400 ಕೋಟಿ
ಸಾಲ ಮರುಪಾವತಿ – 193 ಕೋಟಿ
ಈ ವೇಳೆ ಶಾಸಕಿ ಮಂಜುಳ ಲಿಂಬಾವಳಿ ಮಾತನಾಡಿ, ಪೂರ್ವ ವಲಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ಹಾಳಾಗುತ್ತಿವೆ. ವರ್ತೂರು, ಬೆಳ್ಳಂದೂರು ಕೆರೆ ಅಭಿವೃದ್ಧಿ ವೇಗಗೊಳ್ಳಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಅಗತ್ಯ ಎಂದು ಒತ್ತಾಯಿಸಿದರು.
ಇನ್ನು ಆಯುಕ್ತ ರಮೇಶ್ ಪ್ರತಿಕ್ರಿಯೆ ನೀಡಿ, ಪೂರ್ವ ನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ರಸ್ತೆ ಸಂಪರ್ಕ, ಮೂಲಸೌಕರ್ಯ ಹಾಗೂ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಈ ಬಜೆಟ್‌ನಲ್ಲಿ ಮೂಲಸೌಕರ್ಯ ಕಲ್ಯಾಣ ಯೋಜನೆಗಳ ಸಮತೋಲನ ಕಾಣಿಸಿಕೊಂಡಿದ್ದು, ಪೂರ್ವ ಬೆಂಗಳೂರಿನ ವೇಗದ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಯತ್ನವಾಗಿದೆ ಎಂದರು.
ವಿಶೇಷ ಮೂಲಸೌಕರ್ಯ ಯೋಜನೆಯಡಿ ರಸ್ತೆಗಳಿಗೆ ಮೀಸಲಿಟ್ಟಿರುವ ಅನುದಾನ ಇಂತಿದೆ…
ಮಾರತಹಳ್ಳಿ ವಿಭಾಗ – ರೂ,30 ಕೋಟಿ
ದೊಡ್ಡನೆಕ್ಕುಂಡಿ- ರೂ.32.50 ಕೋಟಿ
ವೈಟ್‌ಫೀಲ್ಡ್ – ರೂ.17 ಕೋಟಿ
ಕಾಡುಗೋಡಿ – ರೂ.0.15 ಕೋಟಿ
ರಾಮಮೂರ್ತಿನಗರ – ರೂ.27.40 ಕೋಟಿ
ಕೆ.ಆರ್. ಪುರಂ – ರೂ.20.50 ಕೋಟಿ
ಹೊರಮಾವು – ರೂ.9 ಕೋಟಿ
ಎಚ್‌ಎಎಲ್ ವಿಮಾನ ನಿಲ್ದಾಣ ವಿಭಾಗ – ರೂ.3.10 ಕೋಟಿ
