117
ಮನೆ, ಸೈಟ್, ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ದಿಯೊಂದನ್ನು ಕಂದಾಯ ಇಲಾಖೆಯು ನೀಡಿದೆ.
ಹಣಕಾಸು ವರ್ಷಾಂತ್ಯ (Financial Year)ದ ಹಿನ್ನೆಲೆ ರಾಜ್ರಾಯದ ಜನತೆಯ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಉಪನೊಂದಣಾಧಿಕಾರಿಗಳ ಕಚೇರಿಗಳು ಮಾರ್ಚ್ 28ರ 4ನೇ ಶನಿವಾರ ಮತ್ತು 29 ಭಾನುವಾರ ಈ ಎರಡು ದಿನಗಳು ಕಾರ್ಯನಿರ್ವಹಿಸಲಿದೆ ಎಂದು ಕಂದಾಯ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ.

ಇನ್ನು, ಮಾರ್ಚ್ 31ರಂದು ಮಹಾವೀರ ಜಯಂತಿಯ ರಜೆಯನ್ನು ಮಾರ್ಚ್ 30ಕ್ಕೆ ಬದಲಾಯಿಸಿರುವುದರಿಂದ ಇದೇ ಮಾರ್ಚ್ 31 ರಂದು ಎಲ್ಲಾ ಕಚೇರಿಗಳು ತೆರೆದಿದ್ದು ಬೆಳಗ್ಗೆ 9.00 ರಿಂದ ಸಂಜೆ 7.30 ರ ವರೆಗೆ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದೆ.