ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರಿಗೆ ಮಹತ್ವದ ಮಾಹಿತಿಯೊಂದು ಹೊಂದಬಂದಿದೆ.
ಈಗಾಗಲೇ ಸರ್ಕಾರದಿಂದ ಇಂದಿರಾಗಾಂಧಿ ವೃದ್ದಾಪ್ಯ ಯೋಜನೆ, ಸಂಧ್ಯಾ ಸುರಕ್ಷ ಯೋಜನೆ, ಅಂಗವಿಕಲರ ಯೋಜನೆ, ವಿಧವಾ ವೇತನ, ಮನಸ್ವಿನಿ ಯೋಜನೆ ಮತ್ತು ಇತರೇ ಸರ್ಕಾರಿ ಸ್ವಾಮ್ಯದ ಯೋಜನೆಗಳ ಮುಖಾಂತರ ಮಾಸಾಷನ ಪಡೆಯುತ್ತಿರುವ ಪಿಂಚಣಿದಾರರು ಆದಾಯ ಪ್ರಮಾಣ ಪತ್ರವನ್ನು ಈ ಕೂಡಲೇ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮಾಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ 30ಸಾವಿರ ರೂ.ಆದಾಯ ಮೀರದಂತೆ ನವೀಕರಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಪ್ರತಿ ತಿಂಗಳು ಬರುವ ಪಿಂಚಣಿ ನಿಂತು ಹೋಗಬಹುದು.
ಇನ್ನು ಈಗಾಗಲೇ ಕೆಲವು ದಿನಗಳಿಂದ ಮೇಲ್ಕಂಡ ಯೋಜನೆಯ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮಾ ಆಗಿರುವುದಿಲ್ಲ, ಆದಾಯ ಪ್ರಮಾಣಪತ್ರ ನವೀಕರಣದ ನಂತರ ಶೀಘ್ರವಾಗಿ ಖಾತೆಗೆ ಜಮೆಯಾಗಲಿದೆ.