Wednesday, April 15, 2026
Home ಕ್ರೀಡೆಮುಗ್ಗರಿಸಿದ ಸಿಎಸ್ ಕೆ: ರಾಜಸ್ಥಾನ್ ಗೆಲುವಿನ ವೈಭವ

ಮುಗ್ಗರಿಸಿದ ಸಿಎಸ್ ಕೆ: ರಾಜಸ್ಥಾನ್ ಗೆಲುವಿನ ವೈಭವ

by Dharmaraju
0 comments

ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಬ್ಯಾಟಿಂಗ್‌ನಲ್ಲಿ ಮಂಕಾಗಿದೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಕೇವಲ 127 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಗುವಾಹತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.4 ಓವರ್ ಗಳಲ್ಲಿ 127 ರನ್ ಗೆ ಆಲೌಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 12.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಸಿಎಸ್ ಕೆ ತಂಡವು 100 ರನ್ ಗಡಿ ದಾಟುವುದು ಅನುಮಾನ ಎನ್ನುವ ಸಂದರ್ಭದಲ್ಲಿ 8ನೇ ಕ್ರಮಾಂಕದಲ್ಲಿ ಬಂದ ಜೆಮಿ ಓವರ್ಟನ್ ಅದ್ಭುತವಾಗಿ ಆಟವಾಡಿದರು. ಅಂತಿಮ ಹಂತದಲ್ಲಿ 42 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ ಓವರ್ಟನ್, ಸಿಎಸ್‌ಕೆ ತಂಡವು ಗೌರವಯುತ ಮೊತ್ತ ತಲುಪಲು ಕಾರಣರಾದರು. ಇವರಿಗೆ ಕಾರ್ತಿಕ್ ಶರ್ಮಾ (18) ಸ್ವಲ್ಪ ಮಟ್ಟಿನ ಸಾಥ್ ನೀಡಿದರು. ಈ ಇಬ್ಬರ ಹೋರಾಟವಿಲ್ಲದಿದ್ದರೆ ಸಿಎಸ್‌ಕೆ ಸ್ಕೋರ್ 80 ರನ್ ದಾಟುವುದು ಕೂಡ ಕಷ್ಟವಿತ್ತು.

ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮತ್ತು ನಾಂದ್ರೆ ಬರ್ಗರ್ ತಮ್ಮ ವೇಗದ ಮೂಲಕ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಿದರೆ, ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮಿಂಚಿದರು. ಈ ಮೂವರು ಬೌಲರ್‌ಗಳು ತಲಾ 2 ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ಬೆನ್ನೆಲುಬು ಮುರಿದರು. ಅಂತಿಮವಾಗಿ ಚೆನ್ನೈ 127 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ರಾಜಸ್ಥಾನ್ ಗೆ ಸಂಚಲನ ಸೃಷ್ಡಿಸಿರುವ ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 52 ರನ್ ಸಿಡಿಸಿ ಮಿಂಚಿನ ಆರಂಭ ನೀಡಿದರು. ಯಶಸ್ವಿ ಜೈಸ್ವಾಲ್ ಅಜೇಯ 38 ರನ್ ಬಾರಿಸಿದರು.

47 ಎಸೆತಗಳಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಇದು ಅತೀ ದೊಡ್ಡ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ಆರ್ ಸಿಬಿ ವಿರುದ್ಧ 42 ಎಸೆತ ಬಾಕಿ ಇರುವಂತೆಯೇ ಗೆದ್ದಿದ್ದು ದಾಖಲೆಯಾಗಿತ್ತು.

You may also like

Leave a Comment