Wednesday, April 15, 2026
Home ಜಿಲ್ಲಾ‌ಸುದ್ದಿಅನ್ನ ನೀಡಿದ ವೃದ್ಧೆಯ ಅಗಲಿಕೆಗೆ ಕಣ್ಣೀರಿಟ್ಟ ಮಂಗ

ಅನ್ನ ನೀಡಿದ ವೃದ್ಧೆಯ ಅಗಲಿಕೆಗೆ ಕಣ್ಣೀರಿಟ್ಟ ಮಂಗ

by Dharmaraju
0 comments

ಚನ್ನಪಟ್ಟಣ:ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ತನಗೆ ಪ್ರತಿದಿನ ಅನ್ನ ನೀಡುತ್ತಿದ್ದ 85 ವರ್ಷದ ವೃದ್ಧೆ ಪಾರ್ವತಿಯಮ್ಮ ಅವರ ನಿಧನದಿಂದ ಮರುಗಿದ ಮಂಗವೊಂದು, ಅವರ ಪಾರ್ಥಿವ ಶರೀರವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ತಾಲೂಕಿನ ಬಿ.ವಿ. ಹಳ್ಳಿ ಗ್ರಾಮದಲ್ಲಿ ಪಾರ್ವತಮ್ಮ (80) ಅವರಯ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಪಾರ್ವತಮ್ಮ ಅವರು ಬದುಕಿದ್ದಾಗ ತಮ್ಮ ಮನೆ ಬಳಿ ಬರುತ್ತಿದ್ದ ಕೋತಿಗೆ ನಿತ್ಯವೂ ತಿಂಡಿ, ಹಣ್ಣು ಮತ್ತು ಆಹಾರವನ್ನು ನೀಡುತ್ತಿದ್ದರು. ಕೋತಿಯನ್ನು ಅವರು ತನ್ನ ಮನೆಯ ಸದಸ್ಯರಲ್ಲಿ ಒಬ್ಬರಂತೆ ಅಪಾರ ಪ್ರೀತಿ ನೀಡಿ ಸಾಕಿ, ಸಲುಹಿದ್ದಾರೆ.

ಪಾರ್ವತಮ್ಮ ಅವರು ಮೃತಪಟ್ಟ ವಿಷಯ ತಿಳಿದ ಕೂಡಲೇ ಅಲ್ಲಿಗೆ ಬಂದ ಕಪಿರಾಯ, ಅಜ್ಜಿಯ ಮೃತದೇಹವನ್ನು ಕಂಡು ಮೂಕರೋದನೆ ಮಾಡಿದೆ. ಅಜ್ಜಿಯ ಮುಖದ ಬಳಿ ಕುಳಿತ ಕೋತಿ, ತಬ್ಬಿಕೊಳ್ಳಲು ಪ್ರಯತ್ನಿಸಿತು. ಅಷ್ಟಕ್ಕೇ ನಿಲ್ಲದೆ, ಮೃತದೇಹದ ಮೇಲೆ ಮಲಗಿ ಆಕೆಯ ಅಗಲಿಕೆಗೆ ಮರುಗಿದೆ.

ಇನ್ನೂ ಮೂಕ ಪ್ರಾಣಿಗೂ ಅಜ್ಜಿ ಇನ್ನು ವಾಪಾಸ್ ಬರಲ್ಲ ಎಂದು ಗೊತ್ತಾಗಿ, ಮರಗುತ್ತಿರುವುದನ್ನು ನೋಡಿ ಇಡೀ ಊರಿಗೆ ಊರೇ ಕಣ್ಣೀರು ಹಾಕಿದೆ.

You may also like

Leave a Comment