Wednesday, April 15, 2026
Home ಬೆಂಗಳೂರು ನಗರBJP, RSS ವಿಷಕಾರಿ ಹಾವುಗಳಂತೆ, ಅವುಗಳನ್ನು ಹೊಡೆದು ಕೊಲ್ಲಬೇಕು: ಪ್ರಚೋದನಕಾರಿ ಭಾಷಣ ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ದೂರು

BJP, RSS ವಿಷಕಾರಿ ಹಾವುಗಳಂತೆ, ಅವುಗಳನ್ನು ಹೊಡೆದು ಕೊಲ್ಲಬೇಕು: ಪ್ರಚೋದನಕಾರಿ ಭಾಷಣ ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ದೂರು

by Dharmaraju
0 comments

ಅಸ್ಸಾಂ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮತ್ತು ಆರ್ ಎಸ್‌ಎಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ. ಅಸ್ಸಾಂ ಚುನಾವಣೆ ಪ್ರಚಾರ ರಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ‘ನಮಾಜ್ ಮಾಡುವಾಗ ವಿಷ ಸರ್ಪ ಬಂದರೆ ನಮಾಜ್ ಅರ್ಧಕ್ಕೇ ಬಿಟ್ಟು ಅದನ್ನು ಕೊಲ್ಲಬಹುದು ಎಂದು ಕುರಾನ್ ಹೇಳುತ್ತದೆ.

ಅದೇ ರೀತಿ ಬಿಜೆಪಿ ಮತ್ತು ಆರ್ ಎಸ್‌ಎಸ್ ವಿಷ ಸರ್ಪವಿದ್ದಂತೆ. ಇದನ್ನು ನೀವು ನಿರ್ನಾಮ ಮಾಡಬೇಕು’ ಎಂದು ಹೇಳಿಕೆ ನೀಡಿದ್ದರು.

ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಆರ್ ಎಸ್‌ಎಸ್ ನವರನ್ನು ಕೊಲ್ಲಬೇಕು ಎಂದು ಕರೆ ನೀಡಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ ಈಗ ಕರ್ನಾಟಕ ಬಿಜೆಪಿ ಘಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ.

ದೂರಿನ ಪ್ರಮುಖ ಅಂಶಗಳು: ಬಿಜೆಪಿ ನಾಯಕರು ನೀಡಿರುವ ದೂರಿನಲ್ಲಿ ಖರ್ಗೆ ಅವರ ಭಾಷಣದ ತುಣುಕನ್ನು ಉಲ್ಲೇಖಿಸಲಾಗಿದ್ದು, ಈ ಕೆಳಗಿನ ಗಂಭೀರ ಆರೋಪಗಳನ್ನು ಮಾಡಲಾಗಿದೆ:
ಪ್ರಚೋದನಾಕಾರಿ ಹೇಳಿಕೆ: “ಕುರಾನ್‌ನಲ್ಲಿ ಬರೆದಿದೆ, ನಮಾಜ್ ಮಾಡುವ ಸಂದರ್ಭದಲ್ಲಿ ವಿಷ ಸರ್ಪ ಕಂಡರೆ ಅದನ್ನು ಕೊಲ್ಲಬೇಕು. ಆರ್.ಎಸ್.ಎಸ್/ಬಿಜೆಪಿ ಕೂಡ ಅದೇ ರೀತಿಯ ವಿಷಸರ್ಪಗಳು. ನೀವು ಅದನ್ನು ಕೊಲ್ಲದಿದ್ದರೆ ಬದುಕುವುದಿಲ್ಲ” ಎಂದು ಹೇಳುವ ಮೂಲಕ ಮುಸ್ಲಿಮರನ್ನು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಜೀವ ಬೆದರಿಕೆ: ಖರ್ಗೆ ಅವರ ಇಂತಹ ಬೇಜವಾಬ್ದಾರಿ ಹೇಳಿಕೆಯಿಂದ ದೇಶದಾದ್ಯಂತ ಇರುವ ಲಕ್ಷಾಂತರ ಬಿಜೆಪಿ ಮತ್ತು ಆರ್.ಎಸ್.ಎಸ್ ಸದಸ್ಯರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾನೂನು ಕ್ರಮಕ್ಕೆ ಒತ್ತಾಯ: ಈ ಹೇಳಿಕೆಯು ಸಮಾಜದಲ್ಲಿ ಧರ್ಮ ಮತ್ತು ಸಮುದಾಯಗಳ ನಡುವೆ ದ್ವೇಷ ಹರಡುವಂತಿದೆ. ಆದ್ದರಿಂದ ಹೊಸ ಕಾನೂನಿನ ಅನ್ವಯ (ಬಿಎನ್‌ಎಸ್) ಸೆಕ್ಷನ್ 196 (ಹಳೆಯ IPC 153A), ಸೆಕ್ಷನ್ 197 (ಹಳೆಯ IPC 153B), ಸೆಕ್ಷನ್ 299 ಮತ್ತು ಸೆಕ್ಷನ್ 353 ಅಡಿಯಲ್ಲಿ ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ: ದ್ವೇಷ ಭಾಷಣದ (Hate Speech) ಪ್ರಕರಣಗಳಲ್ಲಿ ಪೊಲೀಸರು ಯಾವುದೇ ದೂರುದಾರರಿಗಾಗಿ ಕಾಯದೆ ತಾವಾಗಿಯೇ (Suo Motu) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಬಿಜೆಪಿ ತನ್ನ ದೂರಿನಲ್ಲಿ ನೆನಪಿಸಿದೆ. ಅಲ್ಲದೆ, ಇಂತಹ ಹೇಳಿಕೆಗಳಿಂದ ಕಾರ್ಯಕರ್ತರ ಮೇಲೆ ದಾಳಿಯಾಗುವ ಆತಂಕವಿದ್ದು, ಕೂಡಲೇ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದೆ.
ಈ ನಿಯೋಗದಲ್ಲಿ ಶಾಸಕರಾದ ಎಸ್. ಮುನಿರಾಜು, ಸಿ.ಕೆ. ರಾಮಮೂರ್ತಿ, ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ವಕ್ತಾರ ಪ್ರಕಾಶ್ ಎಸ್. ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

You may also like

Leave a Comment