ಬೆಂಗಳೂರು: ಯಲಹಂಕ ಉಪನಗರದ ಬಾಯ್ಸ್ ಹಾಸ್ಟೆಲ್ ಹಿನ್ನಭಾಗದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಅವರ ಬಳಿ 10.5 ಲಕ್ಷ ರೂ. ಮೌಲ್ಯದ 21 ಕೆಜಿ ಗಾಂಜಾ ವಶಪಡಿಸಲಾಗಿದೆ.
ಪೊಲೀಸರು ತಿಳಿಸಿರುವಂತೆ, ಇಬ್ಬರೂ ಹಾಸ್ಟೆಲ್ ಹಿನ್ನಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆರೋಪಿಗಳು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತರಿಸಿ, ಸ್ಥಳೀಯವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳನ್ನ ಗುರುತಿಸಲಾಗಿದ್ದು, ಮೊಹಮ್ಮದ್ ನಿಶಾದ್ (24) ಮರಸಂದ್ರದ ನಿವಾಸಿಯಾಗಿದ್ದು, ಮೂಲತಃ ಕೇರಳದ ಕೊಜಿಕೋಡ್ ನ ಮುಕ್ಕಂ ನಿವಾಸಿ, ಆದೇಶ್ ಪಿ. ದಿಲೀಪ್ (19), ಮಾರಸಂದ್ರದಲ್ಲಿ ವಾಸವಾಗಿದ್ದು ಈತನೂ ಸಹ ಕೇರಳದ ತ್ರಿಶೂರಿನ ಕಟ್ಟೂರಿನವರಾಗಿದ್ದರು.
ಆರೋಪಿಗಳನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ.