ತುಮಕೂರು:- ಡಿವೋರ್ಸ್ ಕೊಡು ಎಂದು ಕೇಳುತ್ತಿದ್ದ ಪತ್ನಿಗೆ ಗಂಡ ಮಚ್ಚಿನೇಟು ಕೊಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ.
ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮೊದಲೆಲ್ಲಾ ಸಂಸಾರ ಚೆನ್ನಾಗಿಯೇ ಇತ್ತು. ಮದುವೆ ವೇಳೆ ನಾಗವೇಣಿಗೆ ಯಾವುದೇ ಕೆಲಸ ಇರಲಿಲ್ಲ. ಇವರಿಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮುದ್ದಾದ ಮಕ್ಕಳೂ ಇವೆ. ಗಂಡ ಗಾರೆ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದ. ಈ ಮಧ್ಯೆ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಈ ಕೆಲಸ ಸಿಕ್ಕ ನಂತರ ಗಂಡ ಹೆಂಡತಿ ಮಧ್ಯೆ ಬಿರುಗಾಳಿ ಶುರುವಾಗಿದ್ದು.
ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದು ಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿತ್ತು ಎಂಬ ಆರೋಪವಿದೆ. ಗಂಡನಿಂದ ವಿಚ್ಛೇದನ ಪಡೆಯೋದಕ್ಕೆ ನಾಗವೇಣಿ ಮುಂದಾಗಿದ್ದಳು ಎಂದು ಆರೋಪಿಸಲಾಗಿದೆ. ಈ ಮಧ್ಯೆ ಗಂಡ ಮಾರುತಿ ತನ್ನ ಪತ್ನಿ ಯಾರದ್ದೋ ಜೊತೆಗೆ ಸಂಬಂಧ ಇಟ್ಕೊಂಡಿದ್ದಾಳೆ ಅನ್ನೋ ಅನುಮಾನಕ್ಕೆ ಬಿದ್ದಿದ್ದ. ಹೀಗಾಗಿ ಜಗಳ ಶುರುವಾಗ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ರು.
ಮೊನ್ನೆ ಗಂಡನ ಜೊತೆಗಿದ್ದ ಮಕ್ಕಳನ್ನು ನೋಡೋದಕ್ಕೆ ನಾಗವೇಣಿ ಹೋಗಿದ್ದಾಳೆ. ಈ ವೇಳೆ ಗಂಡ ಹೆಂಡ್ತಿ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಸಿಟ್ಟಿಗೆದ್ದು ಪತ್ನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.