Wednesday, April 15, 2026
Home ಅಪರಾಧ ಸುದ್ದಿಸಾಮಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡು : ಮಹಿಳೆಯರ ಬ್ಲಾಕ್ ಮೇಲ್ -ಚಿನ್ನಾಭರಣ ಸಹಿತ ಆರೋಪಿಗಳನ್ನ ಬಂಧಿಸಿದ ಪೊಲೀಸರು…!!

ಸಾಮಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡು : ಮಹಿಳೆಯರ ಬ್ಲಾಕ್ ಮೇಲ್ -ಚಿನ್ನಾಭರಣ ಸಹಿತ ಆರೋಪಿಗಳನ್ನ ಬಂಧಿಸಿದ ಪೊಲೀಸರು…!!

by Dharmaraju
0 comments

ಕೆಆರ್.ಪುರ : ಮಹಿಳೆಯ ನಗ್ನ ಪೋಟೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್ ಮೂಲಕ ಮಹಿಳೆಗೆ ಪರಿಚಯವಾಗಿದ್ದ ಆರೋಪಿಗಳು, ನಂತರ ನಂಬರ್ ಎಕ್ಸ್ಚೆಂಜ್ ಮಾಡಿಕೊಂಡು ಕಾಲ್ ಮಾಡೋದು, ಚಾಟ್ ಮಾಡೋದು ಮಾಡ್ತಿದ್ರು. ವಾಟ್ಸ್ ಆ್ಯಪ್ ವಿಡಿಯೋ ಕಾಲ್ ವೇಳೆ ಸ್ಕ್ರೀನ್ ಶಾಟ್ ತಗೆದಿಟ್ಟುಕೊಂಡು ಬೆದರಿಕೆ ಹಾಕಿದ್ರು. ನಿನ್ನ ಗಂಡ, ಫ್ಯಾಮಿಲಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವೀಡಿಯೋ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕ್ತಿದ್ರು. ಬ್ಲಾಕ್ ಮೇಲ್ ಮಾಡಿ ಹಂತ ಹಂತವಾಗಿ ಚಿನ್ನಾಭರಣ ಕೂಡ ಪಡೆದಿದ್ದರು. ಆರೋಪಿಗಳ ಕಾಟಕ್ಕೆ ಬೇಸತ್ತು ಮಹಿಳೆ ಗಂಡನ ಗಮನಕ್ಕೆ ತಂದಿದ್ದರು. ಬಳಿಕ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದರು. ‌

ಕಾರ್ಯಾಚರಣೆ ನಡೆಸಿದ ಪೊಲೀಸರು ಆಂಧ್ರಪ್ರದೇಶದ ಚೆನ್ನೂರು ಮಹೇಶ್, ವನ್ನೂರು ಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ,25 ಲಕ್ಷ ಕ್ಯಾಶ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ನಲ್ಲಿ ಹಲವು ಮಹಿಳೆಯರು, ಯುವತಿಯರ ಫೋಟೋ, ವಿಡಿಯೋಗಳ ಪತ್ತೆಯಾಗಿದೆ.

You may also like

Leave a Comment