ದೊಡ್ಡಬಳ್ಳಾಪುರ; ನಗರದ ದೇವರಾಜ ನಗರ ವಾಸಿ ಗಂಗಾಧರ @ ದಾಸ ಎಂಬಾತನ ಕೊಲೆಯ ಪ್ರಮುಖ ಆರೋಪಿಗೆ ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಕೊಲೆಯತ್ನ ಮತ್ತು ಕೊಲೆ ಆರೋಪಡದಿ ಆರೋಪಿಗೆ 20 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ಹೊರಡಿಸಿ ಆದೇಶಿಸಿದೆ.
ಘಟನೆಯ ಹಿನ್ನೆಲೆ;
ಹಣದ ವಿಚಾರವಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಿನಾಂಕ; 07.01.2019 ರಂದು ದೊಡ್ಡಬಳ್ಳಾಪುರದ ದೇವರಾಜನಗರದ ವಾಸಿ ಎನ್.ಗಂಗಾಧರ @ ದಾಸ (ಕೇಸಿನ ಮೃತ) ನು ಅದೇ ಏರಿಯಾದ ತನ್ನ ಸ್ನೇಹಿತ ಆನಂದ.ಎಸ್ @ ಕಬಾಬ್ ಆನಂದ (ಕೇಸಿನ ಆರೋಪಿ) ನಿಗೆ ಹೊಡೆಯುವ ಉದ್ದೇಶದಿಂದ ತಾನು ಹಾಕಿಕೊಂಡಿದ್ದ ಜರ್ಕಿನ್ ನಲ್ಲಿ ಕಾರದ ಪುಡಿ ಪೊಟ್ಟಣ ಮತ್ತು ಮಚ್ಚನ್ನು ಇಟ್ಟುಕೊಂಡು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ವಾಸಿ ಪವನ್ ಕುಮಾರ್ @ ಪವನ್ @ ಬೆಂಕಿ (ಕೇಸಿನ ಗಾಯಾಳು ಸಾಕ್ಷಿ) ನ ಜೊತೆ ರಾತ್ರಿ ಸುಮಾರು 9.15 ಗಂಟೆಯಲ್ಲಿ ದೊಡ್ಡಬಳ್ಳಾಪುರದ ಪ್ರೀತಿ ವೈನ್ಸ್ ಸರ್ಕಲ್ ಬಳಿ ಬಂದಿದ್ದು, ಅಲ್ಲಿಗೆ ಬಂದ ಆನಂದ @ ಕಬಾಬ್ ಆನಂದನನ್ನು ಪವನ್ ಕುಮಾರನ ಮೂಲಕ ಕರೆಸಿಕೊಂಡು ಕೊರಚರಹಟ್ಟಿ ರಸ್ತೆಯ ಕರೇನಹಳ್ಳಿ ಗ್ರಾಮಕ್ಕೆ ಹೊಗುವ 9ನೇ ಕ್ರಾಸ್ ನ ಕಚ್ಚಾ ರಸ್ತೆಗೆ ಆರೋಪಿಯನ್ನು ಕರೆದುಕೊಂಡು ಹೋಗಿ ಅಲ್ಲಿ ಗಂಗಾಧರ @ ದಾಸನು ಆರೋಪಿ ಆನಂದ @-ಕಬಾಬ್ ಆನಂದನನಿಗೆ ಹೊಡೆಯಲು ಹೋದಾಗ ಆರೋಪಿ ಆನಂದ @ ಕಬಾಬ್ ಆನಂದನು ತನ್ನನ್ನು ಹೊಡೆಯಲು ಬಂದಿದ್ದ ಗಂಗಾಧರ @ ದಾಸನ ಕೈಯಲ್ಲಿದ್ದ ಮಚ್ಚನ್ನು ಕಿತ್ತುಕೊಂಡು ಗಂಗಾಧರ @ ದಾಸನ ತಲೆ, ಮುಖಕ್ಕೆ ಮತ್ತು ದೇಹದ ಇತರೆ ಭಾಗಗಳಿಗೆ 7 ರಿಂದ 8 ಬಾರಿ ಭೀಕರವಾಗಿ ಕತ್ತರಿಸಿ ಕೊಲೆ ಮಾಡಿರುತ್ತಾನೆ ನಂತರ ಬಿಡಿಲಸು ಅಡ್ಡ ಬಂದ ಪವನ್ ಕುಮಾರನಿಗೂ ಸಹ ಹೊಡೆದು ಗಂಭೀರ ಸ್ವರೂಪದ ರಕ್ತಗಾಯ ಮಾಡಿ ಕೊಲೆ ಪ್ರಯತ್ನ ಮಾಡಿರುತ್ತಾನೆಂಬುದು ತನಿಖೆಯಿಂದ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿಗಳಾದ ಸಿದ್ದರಾಜು.ಜಿ, ಪೊಲೀಸ್ ಇನ್ಸೆಕ್ಟರ್ ರವರು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು, ನ್ಯಾಯಾಲಯದಲ್ಲಿ ಪೊಲೀಸ್ ಸಿಬ್ಬಂದಿಗಳಾಗದ ಶಿವಕುಮಾರ್ ಎ.ಜಿ ಮತ್ತು ಚಿತ್ರಲಿಂಗ. ಬಿ ರವರುಗಳು ವಿಚಾರಣೆಗೆ ಸಹಕರಿಸಿದ್ದರು.
ಸದರಿ ಪ್ರಕರಣವು ಘನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಪೀಠಾಸೀನ ದೊಡ್ಡಬಳ್ಳಾಪುರ ದಲ್ಲಿ ಎಸ್.ಸಿ.ನಂ:10015/2019 ರಂತೆ ವಿಚಾರಣೆ ನಡೆದಿದ್ದು, ಸದರಿ ಪ್ರಕರಣದ ಆರೋಪಿ ಆನಂದ @ ಕಬಾಬ್ ಆನಂದನು ಐ.ಪಿ.ಸಿ. ಕಲಂ;302 ರ ಅಡಿಯಲ್ಲಿ ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಘನ ನ್ಯಾಯಾಧೀಶರಾದ ಶ್ರೀಮತಿ. ನಿರ್ಮಲ. ಕೆ ರವರು ದಿನಾಂಕ:03.07.2026 ರಂದು ಪ್ರಕರಣದ ಆರೋಪಿಗೆ ಐ.ಪಿ.ಸಿ ಕಲಂ;302 ರ ಶಿಕ್ಷಾರ್ಹ ಅಪರಾಧಕ್ಕಾಗಿ ಆಜೀವ ಕಾರಾಗೃಹ ವಾಸ (ಜೀವಾವಧಿ) ಶಿಕ್ಷೆ ಹಾಗೂ 20,000/- (ಇಪ್ಪತ್ತು ಸಾವಿರ) ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ಅಭಿಯೋಜನೆ ಇಲಾಖೆ ವತಿಯಿಂದ ಸರ್ಕಾರಿ ಅಭಿಯೋಜಕರಾದ ಶ್ರೀ. ಟಿ.ಎನ್ ನಟರಾಜ ರವರು ವಾದ ಮಂಡಿಸಿದ್ದರು ಹಾಗೂ ಮಾನ್ಯ ಅಭಿಯೋಜನಾ ನಿರ್ದೇಶಕರಾದ (ಪ), ಶ್ರೀಮತಿ. ಅಂಜನಾ ಚವ್ಹಾಣ್ ರವರು ಪ್ರಕರಣದ ವಿಚಾರಣಾ ಮೇಲುಸ್ತುವಾರಿ ನಿಗಾ ವಹಿಸಿದ್ದರು.