Tuesday, May 19, 2026
Home ಬೆಂಗಳೂರು ಗ್ರಾಮಾಂತರಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಆಡಳಿತಾತ್ಮಕವಾಗಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಯಶಸ್ವಿ:

ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಆಡಳಿತಾತ್ಮಕವಾಗಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಯಶಸ್ವಿ:

ನೆಲಮಂಗಲ ತಾಲೂಕಿಗೆ ಸೇರಿದ ಸೋಲೂರು

by Dharmaraju
0 comments

ಬೆಂಗಳೂರು ಗ್ರಾಮಾಂತರ: ಸುಮಾರು 47 ವರ್ಷದಿಂದ ಆತಂತ್ರವಾಗಿದ್ದ, ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಾಗಡಿ ತಾಲೂಕಿಗೆ ಒಳಪಟ್ಟಿದ್ದ ಸೋಲೂರು ಹೋಬಳಿಯನ್ನು, ನೆಲಮಂಗಲ ತಾಲೂಕಿಗೆ ಇಂದು ಆಡಳಿತಾತ್ಮಕವಾಗಿ ಸೇರ್ಪಡೆ ಮಾಡುವ ಕಾರ್ಯಕ್ರಮ ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ನಡೆಯಿತು.

ಇದೇ ವೇಳೆಯಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಶಾಸಕ ಎನ್.ಶ್ರೀನಿವಾಸ್ ಹಾಗೂ ಅಧಿಕಾರಿಗಳಿಗೆ, ಸೋಲೂರು ಹೋಬಳಿಯ ಡಿಜಟಲೀಕೃತ ಭೂ ದಾಖಲೆ ಮತ್ತು ಕಡತಗಳನ್ನು, ದಾಖಲಾತಿಗಳನ್ನು ಹಸ್ತಾಂತರ ಮಾಡಿದರು.

ಸಚಿವರಾದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಸೋಲೂರು ಹೋಬಳಿಗೆ ಒಳ್ಳೇಯದಾಗಿದೆ, ಅಭಿವೃದ್ಧಿಗೆ ಅನುಕೂಲವಾಗಿದೆ, ಎಲ್ಲಾ ಇಲಾಖೆಗಳು ನೆಲಮಂಗಲಕ್ಕೆ ಸೇರಲಿದೆ, ನಾಗರಿಕರು ಇಲಾಖೆಗಳೊಂದಿಗೆ ಸ್ಪಂದಿಸಬೇಕು, ಸೋಲೂರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ಸೇರಿ ದೊಡ್ಡದ್ದಾಗಿತ್ತು, ಇದೀಗ ನೆಲಮಂಗಲಕ್ಕೆ ಆಡಳಿತಾತ್ಮಕವಾಗಿ ಸೇರಿರುವುದು ಉತ್ತಮ ಬೆಳವಣಿಗೆ ಎಂದರು.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮಾತನಾಡಿ ಆಡಳಿತಾತ್ಮಕವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಸೋಲೂರು ಹೋಬಳಿ (ರಾಮನಗರ) ಜಿಲ್ಲೆ ಮಾಗಡಿ ತಾಲೂಕಿಗೆ ಸೇರಿದರೆ ವಿಧಾನಸಭಾ ಚುನಾವಣೆಗೆ ನೆಲಮಂಗಲ ಹಾಗೂ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿತ್ತು, ನೆಲಮಂಗಲಕ್ಕೆ ಸೇರುವ ಬಯಕೆ ಇದ್ದರೂ ಕಳೆದ 47 ವರ್ಷಗಳಿಂದ ಚುನಾವಣೆಗಳ ಪ್ರಣಾಳಿಕೆಯ ವಸ್ತುವಾಗಿತ್ತು. ಆದರೆ ಶಾಸಕ ಎನ್. ಶ್ರೀನಿವಾಸ್‌ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ 3 ವರ್ಷದಲ್ಲಿ ಸೋಲೂರನ್ನು ನೆಲಮಂ ಗಲಕ್ಕೆ ಸೇರ್ಪಡೆ ಮಾಡಿರುವುದು ಉತ್ತಮ ಬೆಳವಣಿಗೆ, ನೆಲಮಂಗಲ ನಗರ, ದಾಬಸ್ ಪೇಟೆ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.

ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾತನಾಡಿ,ಇಂದಿನಿಂದ ಸೋಲೂರು ಜನರು ಆಡಳಿತಾತ್ಮಕವಾಗಿ ನೆಲಮಂಗಲ ತಾಲೂಕಿಗೆ ಸೇರಲಿದ್ದಾರೆ, ಎರಡೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಸೋಲೂರಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ, ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ, ಮುಂದಿನ ದಿನಗಳಲ್ಲಿ ಸೋಲೂರಿ ೪೨ ಸಾವಿರ ಜನತೆಗೂ ಸಿಹಿ ಹಂಚಿ, ಸೋಲೂರು ಉತ್ಸವ ಕೈಗೊಳ್ಳಲಿದ್ದೇವೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ಅನುರಾಧ ಮಾತನಾಡಿ, ಸೋಲೂರು ಹೋಬಳಿಯ ಎಲ್ಲಾ ಮತಗಟ್ಟೆಗಳು, ಬೆಂ.ಗ್ರಾ.ಜಿಲ್ಲೆಗೆ ಒಳಪಡುತ್ತಿದ್ದುವು, ಸುಮಾರು ೩೭ ಸಾವಿರದಿಂದ ೪೨ ಸಾವಿತ ಜನಸಂಖ್ಯೆ, ೦೬ ಪಂಚಾಯತಿ, ಜೊತೆಗೆ ೧೫ ಸಾವಿರ ರೈಯರು ಇದ್ದಾರೇ, ಭೂಮಿ ದಾಖಲಾತಿಗಳೇಲ್ಲಾ ಇನ್ನೊಂದು ವಾರದಲ್ಲಿ ಸಂಪೂರ್ಣ ಪ್ರತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಿಗುತ್ತದೆ, ಡಿಜಟಲೀಕರಣಕ್ಕೆ ಒತ್ತು ನೀಡಿದ್ದೇವೆ ಎಂದರು.

You may also like

Leave a Comment