Tuesday, May 19, 2026
Home ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ

ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ

by Raghavendra H A
0 comments

ದೊಡ್ಡಬಳ್ಳಾಪುರ: ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ, ಪ್ರತಿ ಪ್ರಜೆಯೂ ಸುಖಮಯವಾದ ಜೀವನವನ್ನು ನಡೆಸಲು ಸಾಧ್ಯವಾಗಿರುವುದು ಅಂಬೇಡ್ಕರ್ ರವರ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದ ಎಂದು ಕೊಂಗಾಡಿಯಪ್ಪ ಕಾನೂನು ವಿದ್ಯಾಲಯ ಪ್ರಾಂಶುಪಾಲರಾದ ವೆಂಕಟೇಶ್ ರೆಡ್ಡಿ ಎಂದು ಹೇಳಿದರು.

ನಗರದ ಕೊಂಗಾಡಿಯಪ್ಪ ಎಲ್ ಎಲ್ ಬಿ ಕಾಲೇಜಿನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು,

ಶಿಕ್ಷಣ, ಸಂಘಟನೆ, ಹೋರಾಟ ಇವುಗಳು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ಮಾನದಂಡಗಳು, ಪ್ರಪಂಚ ಎಲ್ಲ ದೇಶಗಳಲ್ಲೂ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂಬುದು ನಮ್ಮ ಹೆಮ್ಮ ಎಂದರು.

ದೊಡ್ಡಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷರಾದ ರೇಣುಕ ಮೂರ್ತಿ ಮಾತನಾಡಿ,  ಮೈಸೂರು ಸಂಸ್ಥಾನದ ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ದೊಡ್ಡಬಳ್ಳಾಪುರದವರೇ ಆದ ಟಿ.ಎಸ್ ಸಿದ್ದಲಿಂಗಯ್ಯನವರು ಭಾಗವಹಿಸಿದ್ದರು ಎಂದರೇ ಅದು ನಮ್ಮ ತಾಲೂಕಿನ ಹೆಮ್ಮೆ, ಭವಿಷ್ಯದಲ್ಲಿ ಉತ್ತಮ ವಕೀಲರಾಗಬೇಕಾದರೇ ನ್ಯಾಯಾಲಯದಲ್ಲಿ ದಿನದ ಬಹುತೇಕ ಸಮಯವನ್ನು ಕಳೆಯಬೇಕು, ಇತ್ತೀಚಿನ ದಿನಗಳಲ್ಲಿ ಕೇವಲ ಪಾರ್ಟ್ ಟೈಂ ಜಾಬ್ ರೀತಿಯಲ್ಲಿ ವಕೀಲರು ವರ್ತಿಸುತ್ತಿದ್ದಾರೆ, ಆದ್ದರಿಂದ ಸಂವಿಧಾನದ ಬಗ್ಗೆ ಆಳವಾದ ಜ್ಙಾನವನ್ನು ಪಡೆದುಕೊಂಡರಷ್ಟೆ ಯಾವುದೇ ನ್ಯಾಯಾಲಯದಲ್ಲಿ ವಾದ ಮಾಡಿ ಜಯಿಸಲು ಸಾಧ್ಯವಾಗುತ್ತದೆ ಎಂದು ಹಿತನುಡಿಗಳ್ಳನ್ನಾಡಿದರು.

ಈ ವೇಳೆ ಶ್ರೀ ಕೊಂಗಾಡಿಯಪ್ಪ ವಿದ್ಯಾಸಂಸ್ಥೆ (ರಿ)ಯ ಅಧ್ಯಕ್ಷರಾದ ರಾಮಶೆಟ್ಟಿ, ಉಪಾಧ್ಯಕ್ಷ ಪಿ.ವಿ. ಶ್ರೀನಿವಾಸಮೂರ್ತಿ, ಗೌರವ ಕಾರ್ಯದರ್ಶಿ ಎಸ್. ಪ್ರಕಾಶ್, ಸಹ ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು, ನಿವೃತ್ತ ಪ್ರಾಂಶುಪಾಲರಾದ ಮಹಬಲೇಶ್ವರ್, ಬಿಇಡಿ ಪ್ರಾಂಶುಪಾಲರಾದ ಮಂಜುನಾಥ್, ಪ್ರೌಢಶಾಲೆ ಪ್ರಾಂಶುಪಾಲರಾದ ಕಂಬದ ರಂಗಯ್ಯ, ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರಾದ ಭಾಸ್ಕರ್, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

You may also like

Leave a Comment