Tuesday, May 19, 2026
Home ಜಿಲ್ಲಾ‌ಸುದ್ದಿಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

ಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

by Dharmaraju
0 comments

ಬೆಳಗಾವಿ: ಜಿಲ್ಲೆಯ ಶಾಹೂನಗರದಲ್ಲಿ ನಡೆದ ಈ ಅಮಾನವೀಯ ಘಟನೆ ಮಾನವೀಯತೆಯೇ ಸತ್ತುಹೋಗಿತೇ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ ಒಂಬತ್ತು ತಿಂಗಳು ಹೊತ್ತು ಜೀವನವನ್ನೇ ಅರ್ಪಿಸಿ ಬೆಳೆಸಿದ ತಾಯಿಯ ಅಂತಿಮ ಕ್ಷಣದಲ್ಲೂ ಜೊತೆಗಿರಲಿಲ್ಲ ಅಂದರೆ ಅದು ಕೇವಲ ನಿರ್ಲಕ್ಷ್ಯವಲ್ಲ ಮನುಷ್ಯತ್ವದ ಸೋಲು.

ತಾಯಿ ಮೃತಪಟ್ಟ ಸುದ್ದಿ ತಿಳಿಸಿದರೂ “ನೀವೇ ಸುಡಿ” ಎಂದು ಹೇಳಿ ದೂರವಿರುವ ಮಕ್ಕಳು… ಈ ಮಾತುಗಳು ಕೇವಲ ಕಿವಿಗೆ ಬೀಳುವುದಿಲ್ಲ, ಮನಸ್ಸನ್ನೇ ಚೂರುಚೂರು ಮಾಡುತ್ತವೆ. ಹಣ ಸ್ವಾರ್ಥ ಬದುಕಿನ ಓಟ ಇವುಗಳ ಮಧ್ಯೆ ನಾವು ನಮ್ಮ ಬೇರುಗಳನ್ನು ಮರೆಯುತ್ತಿದ್ದೇವೆ ಅನ್ನೋದಕ್ಕೆ ಇದು ನಿಜವಾದ ಉದಾಹರಣೆ

ಅದೇ ಸಮಯದಲ್ಲಿ ಸಮಾಜದಲ್ಲೀಗೂ ಮಾನವೀಯತೆ ಜೀವಂತವಾಗಿದೆ ಅನ್ನೋದಕ್ಕೆ ಸಾಕ್ಷಿ ಕೆಲವರು ಸಮಾಜಸೇವಕರು ಮುಂದಾಗಿ ಶಂಕರ್ ಪಾಟೀಲ್ ಅವರ ನೇತೃತ್ವದಲ್ಲಿ ಆ ತಾಯಿಗೆ ಗೌರವಯುತ ಅಂತ್ಯಕ್ರಿಯೆ ನೆರವೇರಿಸಿದರು. ಸಂಬಂಧವಿಲ್ಲದವರು ಕರ್ತವ್ಯ ನಿರ್ವಹಿಸಿದರೆ ಸಂಬಂಧ ಇದ್ದವರು ದೂರ ನಿಂತದ್ದು ಎಷ್ಟು ವ್ಯಥೆಯ ವಿಚಾರ.

ತಾಯಿ ದೇವರು ಅಂತ ಹೇಳುವ ನಾವು, ಆ ದೇವರನ್ನು ಬದುಕಿರುವಾಗಲೇ ಮರೆತುಬಿಟ್ಟರೆ… ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಅನ್ನೋದನ್ನು ಯೋಚಿಸುವ ಸಮಯ ಬಂದಿದೆ.

You may also like

Leave a Comment