ಕೆ.ಆರ್.ಪುರ: ಬಸವನಪುರದ ಗಾಯತ್ರಿ ಬಡಾವಣೆಯ ಶ್ರೀ
ಗಾಯತ್ರಿ ಮಹಾ ಸಂಸ್ಥಾನ ದೇವಪುರಿದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ಗಾಯತ್ರಿ ದೇವಿಯ 32ನೇ ವರ್ಷದ ಬ್ರಹ್ಮರಥೋತ್ಸವವು ಪ್ರತಿವರ್ಷದಂತೆ ಈ ವರ್ಷವು ಅತ್ಯಂತ ವೈಭವದಿಂದ ನಡೆಯಿತು. 11ದಿನಗಳು ನಡೆಯುವ ಈ ಉತ್ಸವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಹೋಮ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಭಕ್ತರ ಘೋಷಣೆಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಭಾವ ಪರವಶರಾದರಾಗಿದ್ದಾರೆ.
ನೂರಾರು ಭಕ್ತರು ಪಂಚಮುಖಿ ಶ್ರೀ ಗಾಯತ್ರಿ ದೇವಿ ಅಮ್ಮನವರ ದರ್ಶನ ಪಡೆದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ವೀರಗಾಸೆ ನೃತ್ಯವು ಬ್ರಹ್ಮ ರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಇಡೇರಿಸಿಕೊಂಡರು.
ಬಸವನಪುರ,ದೇವಸಂದ್ರ,ಕೆ.ಆರ್.ಪುರ,ಕೃಷ್ಣನಗರ,ಅಯ್ಯಪ್ಪ
ನಗರ,ಟಿ.ಸಿ.ಪಾಳ್ಯ,ರಾಮಮೂರ್ತಿನಗರ,ಮೇಡಹಳ್ಳಿ,ಹೊರಮಾವು,ವಿಜ್ಞಾನನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ರಥೋತ್ಸವದ ಸಮಯದಲ್ಲಿ ಬಿಸಿಲಿನ ಬೇಗೆಯನ್ನ ನಿವಾರಿಸಲು ರಸ್ತೆಯುದ್ದಕ್ಕೂ ಪಾನಕ ಮಜ್ಜಿಗೆ ನೀಡಲಾಯಿತು.ದೇವಸ್ಥಾನದ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಲಾಗಿತ್ತು,ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಬ್ರಹ್ಮರಥೋತ್ಸದಲ್ಲಿ ಭಾಗವಹಿಸಿ, ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು, ಕಾಯಿ, ಜವನ ಅರ್ಪಿಸಿದರು ಎಂದು ಪ್ರಧಾನ ಆರ್ಚಕ ಸುಂದರ ಗಣಪಾಟಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್,
ಡಿ.ಕೆ.ಮೋಹನ್, ಮುಖಂಡರಾದ ಶಿವಕುಮಾರ್,ಉದಯ್ ಕುಮಾರ್, ಕೇಬರ್ ರಾಜು,ಜಾನಿ, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿದ್ದರು.