ಮಹದೇವಪುರ: ರಾಜಧಾನಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ರಾಂಪುರ ಬಳಿ ಗುರುವಾರ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ದಟ್ಟವಾದ ಕಪ್ಪು ಹೊಗೆ ಸುಮಾರು 10 ಕಿ.ಮೀ.ವರೆಗೂ ಗೋಚರಿಸಿದೆ.
ಇಂದು ಸಂಜೆ ರಾಂಪುರ ಗ್ರಾಮದ ಹೊರ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ಮರುಬಳಕೆ ಗೋದಾಮಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗೋದಾಮಿನ ಮಾಲೀಕರ ತಮಿಳುನಾಡಿನವನಾಗಿದ್ದು ಇಂದು ಚುನಾವಣೆ ಪ್ರಯುಕ್ತ ಮತದಾನ ಮಾಡಲು ತೆರಲಿದ್ದ ಈ ಸಮಯದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟಾ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಂಪುರ ಗ್ರಾಮದಲ್ಲಿ ಅನುಪಯುಕ್ತ ವಸ್ತುಗಳ(ಗುಜರಿ) ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸುತ್ತಿರುವರಿಂದ ಸುತ್ತಮುತ್ತ ಆತಂಕದ ವಾತವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಸಹ ದೌಡಾಯಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.ಸಂಜೆಯಿಂದಲೂ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಬೆಂಕಿ ಕಿನಾಲೆ ಮಾತ್ರ ಕಡಿಮೆ ಆಗಿತ್ತಿಲ್ಲ.