Tuesday, May 19, 2026
Home ಅಪರಾಧ ಸುದ್ದಿಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

ಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

by Dharmaraju
0 comments

ಕೆ.ಜಿ.ಎಫ್: ಒಂದು ಕ್ಷಣದ ಕೋಪ ಮತ್ತೆ ಅನುಮಾನ ಏನೆಲ್ಲಾ ಮಾಡುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..

ಕೋಲಾರದಲ್ಲಿ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿ ತನ್ನ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಬ*ರ್ಬರವಾಗಿ ಕೊ*ಲೆ ಮಾಡಿದ್ದಾನೆ. ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಈಶ್ವರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ ಎಂದು ಗುರುತಿಸಲಾಗಿದೆ. ಈ ದಂಪತಿ ಇತ್ತೀಚೆಗೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

ಸಂಬಂಧಿಕರ ಭೇಟಿ ಮಾಡಿ ವಾಪಸ್ ಆಗುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಂಪತಿಗಳು ಜಗಳ ಮಾಡಿಕೊಂಡೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಪತ್ನಿಯ ಶೀಲದ ಮೇಲೆ ಮೊದಲೇ ಶಂಕೆ ಹೊಂದಿದ್ದ ಗೋಪಿನಾಥ, ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡಿದ್ದಾನೆ. ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಈಶ್ವರಮ್ಮ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆರೋಪಿ ಗೋಪಿನಾಥ್ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆರೋಪಿಯಿಂದ ಒಂದು ದ್ವಿಚಕ್ರ ವಾಹನ ಹಾಗೂ ಹರಿತವಾದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

You may also like

Leave a Comment