ತಮಿಳುನಾಡಿನ ವಿಧಾನಸಭೆ ಚುನಾವಣೆ 2026ರ ಮತದಾನ ಪ್ರಕ್ರಿಯೆಯು ಇಂದು ನಡೆದಿದೆ. ತಮಿಳುನಾಡಿನ ವಿಧಾನಸಭೆಯ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ನಟ ಹಾಗೂ ರಾಜಕಾರಣಿ ವಿಜಯ್ ಎಂಟ್ರಿ ಹಾಗೂ ಯುವ ಮತದಾರರನ್ನು ಸೆಳೆಯುತ್ತಿರುವುದು ಹೆಚ್ಚು ಹೆಚ್ಚು ಮತದಾರರು ಮತದಾನದಲ್ಲಿ ಭಾಗಿಯಾಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದರೊಂದಿಗೆ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ)ಯೂ ಯುವ ಹಾಗೂ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದ್ದು, ತಮಿಳುನಾಡಿನ ಇತಿಹಾಸದಲ್ಲೇ ದಾಖಲೆಯ ಮತದಾನವಾಗಿದೆ. ಸಂಜೆ 5 ಗಂಟೆಯ ವೇಳೆಗೆ ಭರ್ಜರಿ ಮತದಾನವಾಗಿದೆ. ಸಂಜೆ 6 ಗಂಟೆಯ ವರೆಗೆ 84.29 ರಷ್ಟು ಮತದಾನವಾಗಿದೆ ಎನ್ನುವುದು ಇನ್ನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 23ರ ಗುರುವಾರ ಮತದಾನ ನಡೆದಿದೆ. ತಮಿಳುನಾಡಿನ ಇತಿಹಾಸದಲ್ಲೇ ಇದು ದಾಖಲೆಯ ಮತದಾನ ಎಂದು ಪರಿಗಣಿಸಲಾಗಿದೆ. ತಮಿಳುನಾಡಿನಲ್ಲಿ ಸಂಜೆ 6 ಗಂಟೆಯ ವೇಳೆಗೆ ಶೇ 84.29% ಜನರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಮತದಾನ ಎಂದು ಪರಿಗಣಿಸಲಾಗಿದೆ.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು ಮುಂದುವರಿದಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ತಮ್ಮ ಮೈತ್ರಿ ಪಕ್ಷಗಳನ್ನೇ ನಂಬಿಕೊಂಡಿವೆ. ಡಿಎಂಕೆಯೊಂದಿಗೆ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡಿದ್ದರೆ, ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಬಾರಿ ತಮಿಳಗ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಡುವೆ ನೇರಾ – ನೇರ ಪೈಪೋಟಿ ಸೃಷ್ಟಿಯಾಗಿತ್ತು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದ ಚುನಾವಣೆಯಲ್ಲಿ ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಿತು. ತಮಿಳುನಾಡಿನ ವಿಧಾನಸಭೆ ಚುನಾವಣೆಯ ಫಲಿತಾಂಶವು ಮೇ 4ಕ್ಕೆ ಪ್ರಕಟವಾಗಲಿದೆ. ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿ ಮೇ 10ಕ್ಕೆ ಮುಕ್ತಾಯವಾಗಲಿದೆ.