ಕೆ ಆರ್ ಪುರ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಸಮಾಜ ಸೇವಕ ಆನಂದಪುರ ವಾರ್ಡ್ ಮುಖಂಡ ಹೇಮಂತ್ ತಿಳಿಸಿದರು.

ಆನಂದಪುರದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ , ನೋಟ್ ಪುಸ್ತುಕ, ಪೆನ್ಸಿಲ್ , ರಬ್ಬರ್ ಮುಂತಾದ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯೆ ಕಲಿಯಬೇಕೆಂಬ ಹಂಬಲ ಹಲವು ಮಕ್ಕಳಿಗಿದ್ದರೂ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದರಿಂದ ಎಷ್ಟೋ ಮಕ್ಕಳು ವಿದ್ಯೆಯಿಂದ ದೂರ ಉಳಿದು ಸಮಾಜಕ್ಕೆ ಒಳ್ಳೆಯ ಪ್ರಜೆಗಳು ಮೂಲೆ ಗುಂಪಾಗುತ್ತಿರುತ್ತಾರೆ ಎಂದು ಹೇಳಿದರು.

ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ಈ ಸಮಾಜ ಸೇವೆ ಕಾರ್ಯ ಮಾಡಿಕೊಳ್ಳುತ್ತಾ ಬರುತ್ತಿದ್ದು ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಉಳ್ಳವರು ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದನ್ನು ಬಡವರಿಗೆ ದಾನ ಮಾಡಿದರೆ ಬಡತನ ಸಮಾಜದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆನಂದ ಪುರ ಸರ್ಕಾರಿ ಶಾಲೆಯಲ್ಲಿ 125 ಮಕ್ಕಳಿದ್ದು ಎಲ್ಲಾ ಮಕ್ಕಳಿಗೆ ಇಂದು ನೋಟ್ ಪುಸ್ತುಕ , ಬ್ಯಾಗ್ ಸೇರಿದಂತೆ ಹಲವು ಕಲಿಕಾ ಸಾಮಾಗ್ರಿಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿನಗರಸಭಾ ಸದಸ್ಯರಾದ ಉಮಾಶಂಕರ್, ಭಾಗ್ಯಮ್ಮ, ಗಿರೀಶ್, ಮುಖ್ಯೊಪದ್ಯಾಯರಾದ ನಾಗೇಶ್ , ಭಾನುಮೂರ್ತಿ, ಆರ್.ನಾರಾಯಣಪ್ಪ, ಹೇಮಂತ್ (ಹರಿ) , ನವೀನ್, ಮೋಹನ್, ಶಂಕರ್ , ಮತ್ತಿತರರಿದ್ದರು