ಕೆ.ಆರ್ .ಪುರ: ಸಂತ ಅಂತೋಣಿಯವರ 124 ನೇ ವಾರ್ಷಿಕೋತ್ಸವ 9 ದಿನಗಳವರೆಗೆ ಆಧ್ಯಾತ್ಮಿಕವಾಗಿ ಆಚರಿಸಲಾಯಿತು.ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಬೈರತಿ ಬಸವರಾಜ ಅವರನ್ನು ಟಿ.ಸಿ.ಪಾಳ್ಯ ಪ್ರವೀಣ್ ರೆಡ್ಡಿಯವರು ಸ್ವಾಗತಿಸಿದರು.
ಬಳಿಕ ಟಿ.ಸಿ.ಪಾಳ್ಯ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸಮಾಜದ ಒಳತಿಗಾಗಿ ಪ್ರಾರ್ಥಿಸಿದರು.
ಫಾದರ್ ಫ್ರಾನ್ಸಿಸ್ ಅವರು ಸಂತ ಅಂತೋಣಿಯವರ ಹಬ್ಬದ ಆಡಂಬರ ಗಾಯನ, ದಿವ್ಯ ಬಲಿಪೂಜೆ, ದೃಢೀಕರಣ, ಸಂಸ್ಕಾರ ನೆರವೇರಿಸಿಕೊಟ್ಟರು.
ಸಂತ ಅಂತೋಣಿಯವರ ಹಬ್ಬದ ಹಿನ್ನಲ್ಲೆ ಚರ್ಚ್ ನ ಆಟದ ಮೈದಾನದಲ್ಲಿ ಜಾತ್ರ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಜನ ಸಂತ ಅಂತೋಣಿಯವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಜಾತ್ರೆಯಲ್ಲಿ ಪಾಲ್ಗೊಂಡರು.

ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ವಿದ್ಯುತ್ ದೀಪ, ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು.
ಶತಮಾನ ಇತಿಹಾಸ ಹೊಂದಿರುವ ಈ ಜಾತ್ರೆಗೆ ಟಿ ಸಿ ಪಾಳ್ಯದ ಸುತ್ತಮುತ್ತಲಿನ ಆನಂದಪುರ,ಗ್ರಾಮಗಳಾದ ಬಾಸ್ಕೋ ನಗರ,ಭಟ್ಟರಹಳ್ಳಿ, ಜ್ಯೋತಿನಗರ, ಸೀಗೆಹಳ್ಳಿ, ಲೂರ್ದುನಗರ, ಬಸವನಪುರ,ಸ್ವತಂತ್ರ ನಗರ, ಹಳೆಹಳ್ಳಿ,ಕಿತ್ತಗನೂರು, ಮೇಡಹಳ್ಳಿ ಮುಂತಾದ ಗ್ರಾಮಗಳಿಂದ ಬಂದು ಭಕ್ತಿಯಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಸಂಜೆ ಆರು ಗಂಟೆಗೆ ಸಂತ ಅಂತೋಣಿಯವರ ತೇರಿನ ಮೆರವಣಿಗೆ ಟಿ.ಸಿ ಪಾಳ್ಯದ ಚರ್ಚ್ ಆವರಣದಿಂದ ಆನಂದಪುರ ಸರ್ಕಲ್ ನವರೆಗೆ ಅದ್ದೂರಿಯಾಗಿ ಸಾಗಿತು. ತೇರು ಸಾಗುತ್ತಿದ್ದಂತೆ ನೂರಾರು ಜನ ಕ್ರೈಸ್ತ ಭಕ್ತರು ಕ್ಯಾಂಡಲ್ ಹಿಡಿದು ಬೈಬಲ್ ಪಠಣ ಮಾಡುತ್ತಾ ಸಾಗಿದರು.ಸಂತ ಅಂತೋಣಿಯವರ ಹಾಡುಗಳು ರಸ್ತೆಯುದ್ದಕ್ಕೂ ಪಠಿಸಿದರು.ಮೆರವಣಿಗೆಯ ನಂತರ ಧರ್ಮಗುರುಗಳಿಂದ ಪರಮ ಪ್ರಸಾದ ಆಶೀರ್ವಾದ ನೆರವೇರಿತು.

ಸಂತ ಅಂತೋಣಿಯವರ ಹಬ್ಬಕ್ಕೆ ರಾಜ್ಯ ಯೋಜನಾ ನಿರ್ದೇಶಕಿ ಡಾ.ಕೆ.ವಿದ್ಯಾಕುಮಾರಿ, ಬೆ.ವಿವಿಯ ಉತ್ತರ ವಿಭಾಗದ ರಿಜಿಸ್ಟ್ರಾರ್ ಪ್ರೊ.ಡಾ.ಡಾಮಿನಿಕ್ ಅವರು ಭಾಗವಹಿಸಲಿದ್ದಾರೆ ಎಂದು ಚರ್ಚ್ ನ ಧರ್ಮ ಗುರು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್, ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮುಖಂಡರಾದ ಟಿ.ಸಿ.ಪಾಳ್ಯ ಪ್ರವೀಣ್, ಚಿಟ್ಟಿ, ಜೆಸಿಬಿ ಅಂತೋಣಿ, ವಿನೋದ್ ರೈ ಮತ್ತಿತರರು ಹಾಜರಿದ್ದರು.
