Tuesday, September 8, 2026
Home ಬೆಂಗಳೂರು ನಗರದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

by Dharmaraju
0 comments

ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

ಕೆ.ಆರ್.ಪುರ: ಕೆಂಚಪ್ಪ ಹಾಗೂ ಲಕ್ಷ್ಮಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಕುಟುಂಬದ ವತಿಯಿಂದ ದೇವಸಂದ್ರದ ಬಿವಿಎನ್ ಎಸ್ ಎಸ್ ಶಾಲೆಯ ನೂರಕ್ಕು ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಡಮಕ್ಕಳಿಗೆ ಶಿಕ್ಷಣ ಶುಲ್ಕ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಹಾಗೂ ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ವಿತರಣೆ ಮಾಡಿದರು.

ದೇವಸಂದ್ರದ ಬಿವಿಎನ್ಎಚ್ಎಸ್ ಎಸ್ ಶಾಲೆಯಲ್ಲಿ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಲ್ಲಿ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿದ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಟ್ರಸ್ಟ್‌ನ ವತಿಯಿಂದ ಬಡ ಮಕ್ಕಳ ಹಾಗೂ ಪ್ರತಿಭಾನ್ವಿತ ಮಕ್ಕಳ ಅಭಿವೃದ್ಧಿಗೆ ಕೆಂಚಪ್ಪಹಾಗೂ ಲಕ್ಷ್ಮಮ್ಮಚಾರಿಟೇಬಲ್ ಟ್ರಸ್ಟ್ ಹಾಗೂ ಕುಟುಂಬದವರು ಹಲವು ಯೋಜನೆಗಳನ್ನು ರೂಪಿಸಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು

ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ, ಇದು ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನದ ಫಲ ಎಂದರು.

ವಿದ್ಯಾರ್ಥಿಗಳು ಬಲಿಷ್ಠವಾದಗ ಮಾತ್ರ ದೇಶ ಬಲಿಷ್ಠವಾಗುತ್ತದೆ.
ಟೆಕ್ನಾಲಜಿಯಲ್ಲಿ ಬಲಿಷ್ಠ ವಾಗಬೇಕು.ವೈಜ್ಞಾನಿಕವಾಗಿ ಬಲಿಷ್ಠವಾಗಬೇಕು. ನೀವು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದರೆ ನೀವೆಲ್ಲಾರೂ ಬಲಿಷ್ಠರಾಗಬೇಕು ಆಗ ದೇಶ ಸದೃಢವಾಗುತ್ತೆ ಎಂದು ತಿಳಿಸಿದರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಾತನಾಡಿ
ಭಾರತಕ್ಕೆ ಸ್ವಾತಂತ್ರ್ಯವು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳಿಂದ ಲಭಿಸಿದೆ. ಇಂತಹ ಘನ ಸ್ವಾತಂತ್ರ್ಯದ ಹಿಂದಿರುವ ವ್ಯಕ್ತಿತ್ವಗಳನ್ನು ಸ್ಮರಿಸುವ ಕೈಂಕರ್ಯಗಳು ಚಿರಸ್ಥಾಯಿಯಾಗಿ ಸದಾ ನಡೆಯುತ್ತಿರಬೇಕು ಎಂದರು.

ತಂತ್ರಜ್ಞಾನದ ವೇಗದ ಯುಗದಲ್ಲಿ ಮೌಲ್ಯಗಳನ್ನು ಮರೆಯದೇ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳ ಪರಿಚಯ ಮಾಡಿಕೊಡುತ್ತಿರಬೇಕು. ವಿಶ್ವಭ್ರಾತೃತ್ವ, ಜಗತ್ತೆಲ್ಲವೂ ಒಂದೇ ಕುಟುಂಬವೆಂಬ ಭಾವನೆ, ಸಮಾನತೆ, ಏಕತೆ, ಸೌಹಾರ್ದತೆ, ಭಾವೈಕ್ಯತೆಗಳು ಹಾಗೂ ಜಗತ್ತಿನ ಸರ್ವರ ಹಿತಚಿಂತನೆ ಇವುಗಳು ಭಾರತದ ಜೀವಾಳ. ಇಂತಹ ಮಹೋನ್ನತ ಚಿಂತನೆಗಳಿಂದಲೇ ಭಾರತವು ಜಗತ್ತಿನಲ್ಲಿ ಗೌರವಯುತ ಸ್ಥಾನಗಳನ್ನು ಗಳಿಸಿದೆ ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಲಕ್ಷ್ಮಮ್ಮ, ಟ್ರಸ್ಟ್‌ನ ಡಿ.ಕೆ.ರಮೇಶ್,
ಡಿ.ಕೆ. ರವಿಕುಮಾರ್, ಕಿಶನ್,ನೀಕ್ಷೇಪ್,ಹೃತಿಕ್,ಮೋಹಿತ್ ಇದ್ದರು.

You may also like

Leave a Comment