Sunday, 8 November 2026 — Prajabharat
BREAKING NEWS
ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡ ಎದುರಲ್ಲೇ ಶಾಸಕ ಬೈರತಿ ಬಸವರಾಜ್-ಮಾಜಿ ಶಾಸಕ ನಾರಾಯಣಸ್ವಾಮಿ ನಡುವೆ ವಾಗ್ವಾದ. ಬೆಂಗಳೂರು ನಗರ ಟ್ರಿಫೆಕ್ಟಾ ಎಸ್ಪ್ಲನೇಡ್‌ನಲ್ಲಿ ಸಂಭ್ರಮದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ. ಬೆಂಗಳೂರು ನಗರ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವ ಸಾರಿದ ಬೆಂ.ಪೂರ್ವ ಪಾಲಿಕೆ ಆಯುಕ್ತರು ಡಿ.ಎಸ್. ರಮೇಶ್ ದೇವನಹಳ್ಳಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 16 ಸಾಧಕರ ಆಯ್ಕೆ ಬೆಂಗಳೂರು ನಗರ ಶಾಸಕ ಬೈರತಿ ಬಸವರಾಜಗೆ ನಿಂದನೆ ಕೆ ಆರ್ ಪುರದಲ್ಲಿ ಬುಗಿಲೆದ್ದ ಆಕ್ರೋಶ.ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡ ಎದುರಲ್ಲೇ ಶಾಸಕ ಬೈರತಿ ಬಸವರಾಜ್-ಮಾಜಿ ಶಾಸಕ ನಾರಾಯಣಸ್ವಾಮಿ ನಡುವೆ ವಾಗ್ವಾದ. ಬೆಂಗಳೂರು ನಗರ ಟ್ರಿಫೆಕ್ಟಾ ಎಸ್ಪ್ಲನೇಡ್‌ನಲ್ಲಿ ಸಂಭ್ರಮದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಬೆಂಗಳೂರು ನಗರ ಕ್ಯಾಪಿಟಲ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ದೇಶ ವಿದೇಶಗಳ ಪರಿಚಯ. ಬೆಂಗಳೂರು ನಗರ ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ;ನಂದಿನಿ’ ಟೋನ್ಡ್ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ : ಕೆಎಂಎಫ್ ಆದೇಶ ದೊಡ್ಡಬಳ್ಳಾಪುರ 71ನೇ ಕನ್ನಡ ರಾಜ್ಯೋತ್ಸವ ಕಲರವ,ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ:ಸಚಿವ ಮುನಿಯಪ್ಪ. ಬೆಂಗಳೂರು ನಗರ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವ ಸಾರಿದ ಬೆಂ.ಪೂರ್ವ ಪಾಲಿಕೆ ಆಯುಕ್ತರು ಡಿ.ಎಸ್. ರಮೇಶ್ ದೇವನಹಳ್ಳಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 16 ಸಾಧಕರ ಆಯ್ಕೆ
ಬೆಂಗಳೂರು ನಗರ

ಸಚಿವ ಕೃಷ್ಣಬೈರೇಗೌಡ ಎದುರಲ್ಲೇ ಶಾಸಕ ಬೈರತಿ ಬಸವರಾಜ್-ಮಾಜಿ ಶಾಸಕ ನಾರಾಯಣಸ್ವಾಮಿ ನಡುವೆ ವಾಗ್ವಾದ.

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು

ಕೆ.ಆರ್.ಪುರ: ಕೆ.ಆರ್.ಪುರದಲ್ಲಿ ಸಚಿವ ಕೃಷ್ಣ ಬೈರೇಗೌಡರ ಸಮ್ಮುಖದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಕೆ.ಆರ್.ಪುರ ಸಮೀಪದ ಟಿನ್ ಫ್ಯಾಕ್ಟರಿ ಬಳಿ ಆಯೋಜಿಸಲಾಗಿದ್ದ ‘ವಾರ್ಡ್ ಒನ್’ ಸಾರ್ವಜನಿಕ ಕಾರ್ಯಕ್ರಮದ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರ ಎದುರಲ್ಲೇ ಉಭಯ ಪಕ್ಷಗಳ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಯಿತು.

ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು, ಜಿಬಿಎ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಎಲ್ಲದಕ್ಕೂ ಶಾಸಕರನ್ನೇ ಕರೆದು ಕೆಲಸ ಮಾಡಿಸಿಕೊಳ್ಳಬೇಕಿದೆ ಎಂದು ದೂರು ಹೇಳಲಾರಂಭಿಸಿದರು. ಪದೇ ಪದೇ ಈ ರೀತಿಯ ಮಾತುಗಳು ಕೇಳಿ ಬಂದಾದ ಸಿಟ್ಟಾದ ಸಚಿವ ಕೃಷ್ಣ ಬೈರೇಗೌಡ, ನಮಗೆಲ್ಲಾ ಗೊತ್ತಿದೆ. ಇಲ್ಲಿ ರಾಜಕೀಯ ಮಾಡಲು ಬರಬೇಡಿ, ನಡಿಯಿರಿ ಎಂದು ಗದರಿದರು. ಸಚಿವರ ಜೊತೆ ಬಿಜೆಪಿ ಕಾರ್ಯಕರ್ತರು ಪ್ರತಿವಾದಕ್ಕಿಳಿದಾಗ ಮಧ್ಯ ಪ್ರವೇಶಿಸಿದ ಮಾಜಿ ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಶಾಸಕರಿಗೆ ಬಕೆಟ್‌ ಹಿಡಿಯಲು ಬರಬೇಡ ಎಂದು ಏರಿದಧ್ವನಿಯಲ್ಲಿ ಮಾತನಾಡುತ್ತಾ ಕಾರ್ಯಕರ್ತನಿಗೆ ಅಡ್ಡ ಹೋದರು.

ಆರೋಪ-ಪ್ರತ್ಯಾರೋಪ, ನೂಕಾಟ-ತಳ್ಳಾಟ:
ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ‘ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸ್ಥಳೀಯ ಬಿಜೆಪಿ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ’ ಎಂದು ಬಹಿರಂಗವಾಗಿ ಆರೋಪಿಸಿ ಆಕ್ರೋಶ ಹೊರಹಾಕಿದರು. ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ಸಿಗರ ವಿರುದ್ಧ ತಿರುಗಿಬಿದ್ದರು.

ಈ ವೇಳೆ ಆಕ್ರೋಶಗೊಂಡ ಶಾಸಕ ಬೈರತಿ ಬಸವರಾಜು ಅವರು ಎಂಎಲ್ ಸಿ ನಾರಾಯಣ ಸ್ವಾಮಿಗೆ ಏಯ್‌ ನಿನ್ನ ಎಂಎಲ್‌ಸಿ ಮಾಡಿದ್ದೇ ನಾನು ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಾರಾಯಣ ಸ್ವಾಮಿ ಎಂಎಲ್ ಸಿ ಮಾಡಿದ್ದು ನನ್ನ ಸರ್ಕಾರ ಎಂದರು. ಮಾತಿನ ಚಕಮಕಿಯಿಂದ ಆರಂಭವಾದ ಜಗಳ ಕ್ಷಣಾರ್ಧದಲ್ಲೇ ತಾರಕಕ್ಕೇರಿತು.ನಂತರ ಎಂಎಲ್ ಎ ಮಾಡಿದ್ದು ನಾವು ಎಂದ ನಾರಾಯಣಸ್ವಾಮಿಗೆ ನಿನ್ನಿಂದ ಏನು ಆಗಿಲ್ಲ ನನಗೆ ಜನ ಆಶಿರ್ವಾದ ಮಾಡಿ ಜನ ಗೆಲ್ಲಿಸಿರುವುದು ಇಲ್ಲಿಂದ ನಡಿ‌ ನಡಿ‌ ಎಂದು ಶಾಸಕ ಬೈರತಿ ಬಸವರಾಜ್ ಹೇಳಿದರು.

ನಾನು ಎಂಎಲ್ ಸಿ ಇಲ್ಲಿಗೆ ಅಂದ ನಾರಾಯಣಸ್ವಾಮಿಗೆ ಇಲ್ಲಿ ಯಾವುದು ಇಲ್ಲ ಹೋಗು ನೀನು ಎಂದು ಶಾಸಕರು ಗುಡಿಗಿದರು.

ಸ್ಥಳದಲ್ಲೇ ಸಚಿವರಿದ್ದಾರೆ ಎಂಬುದನ್ನೂ ಲೆಕ್ಕಿಸದೆ ಉಭಯ ಪಕ್ಷಗಳ ನಾಯಕರು ಪರಸ್ಪರ ಕೈ-ಕೈ ಮಿಲಾಯಿಸುವ ಹಾಗೂ ನೂಕಾಟ-ತಳ್ಳಾಟ ನಡೆಸುವ ಹಂತಕ್ಕೆ ತೆರಳಿದರು. ಸ್ಥಳದಲ್ಲಿದ್ದ ಇತರ ಮುಖಂಡರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಮುಖ್ಯ ಸಂಪಾದಕರು (Chief Editor) ✍️ 310 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment