Thursday, 26 November 2026 — Prajabharat
BREAKING NEWS
Uncategorized ದೊಡ್ಡಬಳ್ಳಾಪುರ: ಇಂದು ದಿನಪೂರ್ತಿ ನಗರ ಹಾಗೂ ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಬಂದ್  ಬೆಂಗಳೂರು ನಗರ ಕಾಮಗಾರಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಬೈರತಿ ಬಸವರಾಜ ತಾಕೀತು ಅಪರಾಧ ಸುದ್ದಿ ದೊಡ್ಡಬಳ್ಳಾಪುರ: ಜೆಸಿಬಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ, ಬೈಕ್ ಸವಾರ ಸಾವು ಬೆಂಗಳೂರು ನಗರ ಬೆಂಗಳೂರಿನ‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ: ಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಕಾಂಕ್ರೀಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಬೈರತಿ ಬಸವರಾಜ. Uncategorized ವೃದ್ದೆಯ ಹೊಟ್ಟೆಯಲ್ಲಿದ್ದ 6ಕೆಜಿ ಗೆಡ್ಡೆ, ಸರ್ಕಾರಿ ವೈದ್ಯೆ ಡಾ.ಅರ್ಚನ ಮತ್ತು ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ. ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ Uncategorized ದೊಡ್ಡಬಳ್ಳಾಪುರ: ಇಂದು ದಿನಪೂರ್ತಿ ನಗರ ಹಾಗೂ ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಬಂದ್  ಬೆಂಗಳೂರು ನಗರ ಕಾಮಗಾರಿ ಗುಣಮಟ್ಟ ಕಾಪಾಡಿ ಎಂದು ಶಾಸಕ ಬೈರತಿ ಬಸವರಾಜ ತಾಕೀತು ಅಪರಾಧ ಸುದ್ದಿ ದೊಡ್ಡಬಳ್ಳಾಪುರ: ಜೆಸಿಬಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ, ಬೈಕ್ ಸವಾರ ಸಾವು ಬೆಂಗಳೂರು ನಗರ ಬೆಂಗಳೂರಿನ‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸರ್ಕಾರದ ಗುರಿ: ಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಕಾಂಕ್ರೀಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಬೈರತಿ ಬಸವರಾಜ. Uncategorized ವೃದ್ದೆಯ ಹೊಟ್ಟೆಯಲ್ಲಿದ್ದ 6ಕೆಜಿ ಗೆಡ್ಡೆ, ಸರ್ಕಾರಿ ವೈದ್ಯೆ ಡಾ.ಅರ್ಚನ ಮತ್ತು ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ. ಬೆಂಗಳೂರು ಗ್ರಾಮಾಂತರ ಪ್ರಜಾ ಸೇವೆ ಆಂದೋಲನ ಸಭೆ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ: ಸಚಿವ ಕೆ.ಹೆಚ್. ಮುನಿಯಪ್ಪ ಬೆಂಗಳೂರು ನಗರ ಕೇಂಬ್ರಿಡ್ಜ್ ಕಾಲೇಜಿನಲ್ಲಿ ‘ಇನಾರಾ ಹಬ್ಬ’ದ ಸಂಭ್ರಮ
ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಮುಂಜಾನೆ 4 ಗಂಟೆ ಬಿರಿಯಾನಿ ಸಿಗಲ್ಲ ಯಾಕೆ ಗೊತ್ತಾ?ಮತ್ತೆ ಎಷ್ಟು ಗಂಟೆಗೆ ಸಿಗುತ್ತೆ..?

Dharmaraju
ವರದಿ: Dharmaraju ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮುಂಜಾನೆ ಸಮಯದಲ್ಲಿ ತೆರೆಯುತ್ತಿದ್ದ ಬಿರಿಯಾನಿ ಸೆಂಟರ್‌ಗಳು ಹಾಗೂ ಕೆಲವು ಹೋಟೆಲ್‌ಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಮುಂಜಾನೆ 4 ಗಂಟೆಯಿಂದಲೇ ಬಿರಿಯಾನಿ ಸೆಂಟರ್‌ಗಳನ್ನು ತೆರೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ, ಕೆಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

ಇದರ ಜೊತೆಗೆ ಅಪಘಾತ, ಗಲಾಟೆ ಹಾಗೂ ಕಳ್ಳತನದಂತಹ ಘಟನೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮತ್ತು ಬಿರಿಯಾನಿ ಸೆಂಟರ್ ಮಾಲೀಕರ ಸಭೆ ನಡೆಸಿದ್ದು, ಬಿರಿಯಾನಿ ಸೆಂಟರ್‌ಗಳನ್ನು ಬೆಳಗ್ಗೆ 6 ಗಂಟೆಯ ನಂತರವಷ್ಟೇ ತೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್‌ಟಿಆರ್ ರಸ್ತೆ ಹಾಗೂ ಜಾಲರಹಳ್ಳಿ ಭಾಗದಲ್ಲಿ ಮುಂಜಾನೆ ಬಿರಿಯಾನಿಗಾಗಿ ಬರುವವರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮತ್ತು ಕೆಲವು ಅಪಘಾತಗಳು ಸಂಭವಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವದ ವ್ಯಾಪಾರಕ್ಕೆ ಸಮಯದ ನಿರ್ಬಂಧ ವಿಧಿಸಲಾಗಿದೆ.

ಇನ್ನು ಟೋಲ್ ಗೇಟ್ ಸುತ್ತಮುತ್ತಲಿನ ಅಂಗಡಿಗಳನ್ನು ರಾತ್ರಿ 11 ಗಂಟೆಯ ನಂತರ ತೆರೆಯಬಾರದು, ಹೋಟೆಲ್ ಮತ್ತು ಬಿರಿಯಾನಿ ಸೆಂಟರ್‌ಗಳ ಆವರಣದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು, ಮುಂಜಾನೆ ಬರುವ ಗ್ರಾಹಕರಿಂದ ಗಲಾಟೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಪೊಲೀಸರು ನೀಡಿರುವ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಹೋಟೆಲ್‌ಗಳು ಮತ್ತು ಬಿರಿಯಾನಿ ಸೆಂಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮುಖ್ಯ ಸಂಪಾದಕರು (Chief Editor) ✍️ 319 ಲೇಖನಗಳು

Dharmaraju

Dharmaraju ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment