ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪತ್ರಕರ್ತ ಪ್ರದೀಪ್ ಕುಮಾರ್ ಆರ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಮಲ್ಟಿ ಮೀಡಿಯ ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಅಮೇರಿಕಾದ ಬೋಸ್ಟನ್ ಇಂಪೀರಿಯಲ್ ವಿಶ್ವವಿದ್ಯಾಲಯದಿಂದ ಇಂದು ಗೋವಾದಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್) ಪದವಿ ಪ್ರಧಾನ ಮಾಡಲಾಯಿತು.

ಪ್ರದೀಪ್ ಕುಮಾರ್ ರವರು ಹಲವು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕು ವರದಿಗಾರರಾಗಿ ಹಲವು ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಸದ್ಯ ಹೊಸದಿಗಂತ ದಿನಪತ್ರಿಕೆಯಲ್ಲಿ ತಾಲ್ಲೂಕು ವರದಿಗಾರರಾಗಿದ್ದಾರೆ. ಇದೀಗ ಅವರು ಮಂಡಿಸಿರುವ ಮಹಾ ಪ್ರಬಂಧಕ್ಕೆ ಅಮೇರಿಕಾದ ಬೋಸ್ಟನ್ ಇಂಪೀರಿಯಲ್ ವಿಶ್ವವಿದ್ಯಾಲಯದಿಂದ ಗೋವಾದಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್) ಪದವಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿಯ ಶ್ರೀ ಸದ್ಗುರು ಭಾವು ಮಹಾರಾಜ್, ಆರ್ಥಿಕ ತಜ್ಞರಾದ ಡಾ ಎಂ ಆರ್ ರಂಗನಾಥ ಸೇರಿದಂತೆ ಅನೇಕ ಗಣ್ಯರು ಇದ್ದರು.