ದೊಡ್ಡಬಳ್ಳಾಪುರ : ತಾಲೂಕಿನ ಜನತೆಗೆ ಒಂದೇ ಒಂದು ಮನೆ ಕೊಟ್ಟಿಲ್ಲ, ಒಂದು ಸಭೆ ಮಾಡಿಲ್ಲ, ಸುಳ್ಳು ಭಾಷಣ, ದುಡ್ಡಿನ ಆಡಂಬರದ ಜನಪ್ರತಿನಿಧಿ ಎಂದು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು ಕಾರ್ಯವೈಖರಿಯನ್ನ ಮಾಜಿ ಶಾಸಕ ಟಿ.ವೆಂಕಟರಣಯ್ಯ ಪ್ರಶ್ನಿಸಿದರು.
ಗುರುವಾರ ದೊಡ್ಡಬಳ್ಳಾಪುರ ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ನಾನು ನನ್ನ ಎರಡು ಅವಧಿಯಲ್ಲಿ 35 ಸಾವಿರ ಜನರು ಮನೆ ಕಟ್ಟಲು ಆಸಕ್ತಿ ತೋರಿದ್ದರು,18 ಸಾವಿರ ಮನೆ ಕಟ್ಟಲಾಗಿದೆ ಎಂದು ದಾಖಲೆಗಳನ್ನ ತೋರಿಸಿ ಹಾಲಿ ಶಾಸಕರು ಇಲ್ಲಿಯವರೆಗೂ ಒಂದೇ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದರು.
ನನ್ನ ಅವಧಿಯಲ್ಲಿ ಬಗರ್ ಹುಕುಂ ಸಭೆಗಳನ್ನ ನಡೆಸುವ ಮೂಲಕ ಪ್ರತಿ ಸಭೆಯಲ್ಲಿ ಅರ್ಹ 20 ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ, 19-23 ರ ವರೆಗೆ ಬಿಜೆಪಿ ಸರ್ಕಾರ ಇದ್ದಾಗಲೂ ನಾನು 2 ಸಾವಿರ ಮನೆ, ಸಾವಿರಾರು ಜನರಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಿದ್ದೇವೆ, ಎಂದರು ಹಾಲಿ ಶಾಸಕರು ಇದುವರೆಗೆ ಕೇವಲ ಆರು ಸಭೆ ಮಾಡಿದ್ದೂ, ಮೂರುವರೆ ವರ್ಷ ವ್ಯರ್ಥ ಮಾಡಿದ್ದಾರೆ ಎಂದರು.
ಈ ವೇಳೆ ತಾಲ್ಲೂಕು ಕಾಂಗ್ರೆಸ್ ಮುಖಂಡರುಗಳಾದ ಜಿ.ಲಕ್ಷ್ಮೀಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.